ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯೋಗ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಡಿಸೆಂಬರ್ 2025, 23:30 IST
Last Updated 26 ಡಿಸೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದಂತವೈದ್ಯರಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ವೃತ್ತಿಯಲ್ಲಿ ಅತೀವ ಗಮನವಿರಬೇಕಾಗುತ್ತದೆ. ಕುಟುಂಬದ ಹಿರಿಯರು ಮಾಡಿದ ಪುಣ್ಯದ ಫಲಗಳು ಸಿಗಲಿವೆ. ಕುಟುಂಬದಲ್ಲಿ ಉಂಟಾಗಿದ್ದ ಕಲಹ ದೂರಾಗಲಿದೆ.
  • ವೃಷಭ
  • ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ಸ್ಥಿತಿಗತಿಗಳನ್ನು ನೋಡಿಕೊಂಡು ನಿವೇಶನ  ಖರೀದಿಸುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಸರ್ಕಾರಿ ಉದ್ಯೋಗಸ್ಥರು ಬಡ್ತಿ ಹೊಂದಲು ಬೇಕಾದ ತಯಾರಿ ಮಾಡಿ.
  • ಮಿಥುನ
  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು‌ ಕೆಲಸಗಳಲ್ಲಿ ಯಶಸ್ವಿ ಆಗುತ್ತೀರಿ. ದಾಂಪತ್ಯದಲ್ಲಿ ತಗ್ಗಿ-ಬಗ್ಗಿ ನಡೆಯುವುದನ್ನು ಕಲಿಯಿರಿ. ಇಲ್ಲವಾದಲ್ಲಿ ವಿರಸಕ್ಕೆ ಕಾರಣ. ಕೆಲಸದ ಹೊರೆ ಬೆಟ್ಟದಂತೆ ಇರುವುದು.
  • ಕರ್ಕಾಟಕ
  • ಔಷಧ ಕಂಪನಿಗಳಿಗೆ ಮತ್ತು ಔಷಧ ಮಾರಾಟ ಪ್ರತಿನಿಧಿಗಳಿಗೆ ಮಾರಾಟದಲ್ಲಿ ಹೆಚ್ಚಳ. ಬಾಲ್ಯದಲ್ಲಿ ಕಲಿತ ಕೆಲ ವಿಷಯಗಳು  ಉಪಯೋಗಕ್ಕೆ ಬರಲಿವೆ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
  • ಸಿಂಹ
  • ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸಿ ಮುಂದಿನ ಹಂತವನ್ನು ಮುಟ್ಟುವಿರಿ. ಹಣಕಾಸಿನ ತಾಪತ್ರಯಗಳು ಶೀಘ್ರ ಪರಿಹಾರವಾಗುವುದು.
  • ಕನ್ಯಾ
  • ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿ ಹುದ್ದೆ ಸಿಗಲಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರವರ್ಗದವರ ಬೆಂಬಲ ಸಿಗಲಿದೆ. ಹಿರಿಯರ ಶುಶ್ರೂಷೆಯ ಬಗ್ಗೆ ಗಮನಹರಿಸಿ.
  • ತುಲಾ
  • ಮರಮಟ್ಟು, ಕೃಷಿ, ಹೈನುಗಾರಿಕೆ  ವೃತ್ತಿಗಳಲ್ಲಿರುವವರಿಗೆ ನಿರೀಕ್ಷಿತ ವರಮಾನ ದೊರೆಯಲಿದೆ. ಮನೆ ಕಟ್ಟುವ ಕೆಲಸ ದೇವರ ಕೃಪೆಯಿಂದ ನಿರ್ವಿಘ್ನವಾಗಿ ಮುಂದುವರಿಯಲಿದೆ. ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದು.
  • ವೃಶ್ಚಿಕ
  • ಸೇವಿಸುವಂಥ ಆಹಾರದಿಂದ ಆರೋಗ್ಯ ಹದಗೆಡುವಂತಾಗಬಹುದು. ಕಾಗದಪತ್ರ ಬರೆಯುವವರಿಗೆಗೆ ಮತ್ತು ಕಂಪ್ಯೂಟರ್ ಕೆಲಸಗಾರರಿಗೆ ತೃಪ್ತಿಕರ ದಿನ. ವಾಣಿಜ್ಯ ಬೆಳೆಗಾರರಿಗೆ ಉತ್ತಮ ಬೆಲೆ ದೊರಕಲಿದೆ.
  • ಧನು
  • ಶಿಕ್ಷಣ ವೃತ್ತಿಯಲ್ಲಿರುವವರಿಗೆ ಒತ್ತಡ ವೃದ್ಧಿಯಾಗುತ್ತದೆ. ಶೈಕ್ಷಣಿಕ ರಂಗದಲ್ಲಿನ  ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಸಂಪಾದಿಸುವಿರಿ.ಶುಭ ಕಾರ್ಯಗಳಿಗೆ ರಾಹುಕಾಲದ ನಂತರ ಪ್ರಯಾಣ ಬೆಳೆಸಿ.
  • ಮಕರ
  • ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಕಡೆ ಗಮನವನ್ನು ನೀಡಬೇಕಾಗಬಹುದು. ಈ ದಿನದ ನಿರಾಸೆಯ ಜೀವನ ಶೈಲಿ  ಹಂತ ಹಂತ ಮುಕ್ತಾಯವಾಗುವುದು. ಹಳೆಯ ಯೋಜನೆಗಳಿಗೆ ಮರುಜೀವ ಸಿಗಲಿದೆ.
  • ಕುಂಭ
  • ಸುಗಂಧ ದ್ರವ್ಯದ ಬಗ್ಗೆ ಕೆಲಸ ಮಾಡುತ್ತಿರುವವರಿಗೆ  ಬಯಸಿದ ಫಲಿತಾಂಶ ದೊರೆಯಲಿದೆ. ಕೌಟುಂಬಿಕ ವಿಷಯಗಳತ್ತ  ಗಮನಹರಿಸ ಬೇಕಾಗುವುದು. ಜನರೊಂದಿಗೆ ಬೆರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ.
  • ಮೀನ
  • ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳಲು ಸಹೋದರರ ಉತ್ತಮ ಸಹಕಾರ ದೊರೆಯುವುದು. ಹಠ ಸ್ವಭಾವವನ್ನು ಕಡಿಮೆ ಮಾಡುವುದರಿಂದ ಏಳಿಗೆ ಇರುವುದು. ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.