ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವ್ಯಾಪಾರ–ವ್ಯವಹಾರದಲ್ಲಿ ಲಾಭ

ಈ ದಿನದ ರಾಶಿ ಭವಿಷ್ಯ

ಪ್ರಜಾವಾಣಿ ವಿಶೇಷ
Published 10 ಜುಲೈ 2023, 18:31 IST
Last Updated 10 ಜುಲೈ 2023, 18:31 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಕುಟುಂಬದವರ ಮಾತುಗಳಿಗೆ ಬೆಲೆ ಕೊಡುವುದು ಮತ್ತು ಎಲ್ಲರಲ್ಲೂ ಸಹನೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಲಿದೆ. ನೀಲಿ ಬಣ್ಣ ಶುಭ ತರಲಿದೆ.
  • ವೃಷಭ
  • ಕೆಲಸ ಕಾರ್ಯಗಳು ಕೈಗೂಡಲೆಂದು ದೇವರಲ್ಲಿ ಹರಕೆ ಹೊತ್ತಿರುವ ವಿಚಾರವನ್ನು ತೀರಿಸುವ ಬಗ್ಗೆ ಹೆಚ್ಚಿನ ಪ್ರಯತ್ನ ಇರಲಿ. ಯುವ ಕೃಷಿಕರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ.
  • ಮಿಥುನ
  • ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಹೆಚ್ಚಲಿದೆ. ದೈವಾನುಗ್ರಹದಿಂದ ಸಾಂಸಾರಿಕವಾಗಿ ಮತ್ತು ಆರ್ಥಿಕವಾಗಿಯೂ ಇಷ್ಟಾರ್ಥ ಸಿದ್ಧಿಸುವುದು. ಬಯಸಿದ ಕೆಲಸಗಳನ್ನು ತ್ವರಿತವಾಗಿ ಮಾಡಿ ಮುಗಿಸುತ್ತೀರಿ.
  • ಕರ್ಕಾಟಕ
  • ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ತೋರಿಬಂದರೂ ಅಭಿವೃದ್ಧಿದಾಯಕವಾದ ಬೆಳವಣಿಗೆ ಹರ್ಷವನ್ನು ತರುವುದು. ಇಂದಿನಿಂದ ಮತ್ತೊಬ್ಬರ ಅವಲಂಬನೆ ಬೇಡವೆನಿಸುತ್ತದೆ. ದ್ವಿಚಕ್ರ ವಾಹನ ಕೊಳ್ಳುವ ಯೋಗವಿದೆ.
  • ಸಿಂಹ
  • ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಮನಸ್ಸು ಉಲ್ಲಾಸದಿಂದ ಇರುವುದು. ದಾಖಲೆ ಅಥವಾ ಒಪ್ಪಂದಗಳಿಗೆ ಎಚ್ಚರ ವಹಿಸಿ ಸಹಿ ಮಾಡಿರಿ. ಈ ವಿಚಾರದಲ್ಲಿ ಕಳವಳ ಬೇಡ.
  • ಕನ್ಯಾ
  • ವ್ಯಾಪಾರ ವ್ಯವಹಾರದಲ್ಲಿ ಲಾಭ, ನಷ್ಟ ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ. ರಬ್ಬರ್ ಮತ್ತು ಪ್ಲಾಸ್ಟಿಕ್ ವ್ಯಾಪಾರಗಳಿಂದ ಲಾಭವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಾಣುವುದು.
  • ತುಲಾ
  • ತಾಂತ್ರಿಕ ಪರಿಣತರಿಗೆ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಉನ್ನತ ಯಶಸ್ಸು ದೊರೆತು ಆನಂದವಾಗುತ್ತದೆ. ವೈಯಕ್ತಿಕ ಜೀವನದ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿಮೂಡಲಿದೆ.
  • ವೃಶ್ಚಿಕ
  • ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿ ಉತ್ತಮ ಚಟುವಟಿಕೆಗಳು ಇರುವುದು. ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಇರುವುದು. ನೂತನ ವ್ಯಾಪಾರಿಗಳು ವ್ಯಾಪಾರದಲ್ಲಿ ಪ್ರಬುದ್ಧತೆಯಿಂದ ವ್ಯವಹರಿಸಿ.
  • ಧನು
  • ಮುಖಂಡತ್ವದ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ನಿರೀಕ್ಷೆಗೂ ಮೀರಿ ಸಹಾಯ ಸೌಹಾರ್ದಗಳು ದೊರೆಯುವುದು. ಷೇರು ವ್ಯವಹಾರಗಳಿಂದ ಹೆಚ್ಚಿನ ಲಾಭಾಂಶವನ್ನು ಪಡೆದುಕೊಳ್ಳುವಿರಿ.
  • ಮಕರ
  • ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ, ಕೂಡಲೇ ಬಗೆಹರಿಸಿಕೊಳ್ಳಿರಿ. ಮಹತ್ವದ್ದೆನಿಸಿದ ಕೆಲಸಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸ ಬೇಕಾಗುವುದು.
  • ಕುಂಭ
  • ಕಲಾ ಸೇವೆ ಗುರುತಿಸಿ ಪ್ರಶಂಸೆ ಹಾಗೂ ಸನ್ಮಾನ ದೊರೆಯಲಿದೆ. ಕೆಲವರ ಸಂಬಂಧವು ಕೊನೆಗೊಳ್ಳುವಂಥ ಪರಿಸ್ಥಿತಿ ಎದುರಾಗಬಹುದು. ವಾಹನ ಬಿಡಿಭಾಗಗಳ ಮಾರಾಟಗಾರರಿಗೆ ಆದಾಯದದಿನ.
  • ಮೀನ
  • ಆಡುವ ಸುಳ್ಳು ಮಾತಿನ ಫಲವನ್ನು ತಕ್ಷಣದಲ್ಲಿ ಅನುಭವಿಸುವಂತಾಗುವುದು. ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿ. ದವಸ ಧಾನ್ಯಗಳ ದಾಸ್ತಾನಿಗಾಗಿ ಬಂಡವಾಳ ಹೂಡುವುದು ಸರಿಯಲ್ಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.