ದಿನ ಭವಿಷ್ಯ: ಮೇ 9 ಶುಕ್ರವಾರ 2025– ಕುಟುಂಬದ ಬಗೆಗಿನ ಹಲವು ವಿಚಾರಗಳು ತಿಳಿಯಲಿವೆ
ದಿನ ಭವಿಷ್ಯ: ಮೇ 9 ಶುಕ್ರವಾರ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಮೇ 2025, 19:19 IST
Last Updated 8 ಮೇ 2025, 19:19 IST
ದಿನ ಭವಿಷ್ಯ
ಮೇಷ
ಯಾವುದೇ ಬದಲಾವಣೆಯಾದರೂ ಅವು ಧನಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ. ಏನಕ್ಕೂ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಿ. ಆಲಂಕಾರಿಕ ವಸ್ತುಗಳ ಖರೀದಿಯಿಂದ ಸಂತೋಷವಾಗುವುದು.
ವೃಷಭ
ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ. ತಂಗಿಗಾಗಿ ಸಮಯ ಮತ್ತು ಹಣ ಖರ್ಚು ಮಾಡಬೇಕಾದ ಸಂದರ್ಭ ಬರುವುದು. ಅನಿವಾರ್ಯದ ದೂರ ಸಂಚಾರವನ್ನು ರಾಹುಕಾಲದ ನಂತರ ಆರಂಭಿಸಿರಿ.
ಮಿಥುನ
ಕೆಲಸವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ನಡೆಸಿ. ಕಳೆದು ಹೋಗಿದ್ದ ಆದರೆ, ಮನಸ್ಸಿಗೆ ಹತ್ತಿರವಾದ ವಸ್ತುಗಳು ಶೀಘ್ರವೇ ಪತ್ತೆಯಾಗಿ ಕೈ ಸೇರುವುದು.
ಕರ್ಕಾಟಕ
ಗುರಿಯನ್ನು ಮುಟ್ಟುವತ್ತ ಹಾದಿಯನ್ನು ಮತ್ತೊಮ್ಮೆಪರಿಶೀಲಿಸಿಕೊಂಡಲ್ಲಿ ಯೋಜನೆಗಳು ಆಲೋಚಿಸಿದ್ದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿ ನೆರವೇರುವುದು. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ವೇದಿಕೆ ಸಿಗಲಿದೆ.
ಸಿಂಹ
ಆಯ್ಕೆ ಮಾಡುವ ವಿಚಾರದಲ್ಲಿ ಮನಸ್ಸಿನ ಚಂಚಲ ಸ್ವಭಾವದಿಂದ ವಿಫಲರಾಗುವ ಸನ್ನಿವೇಶಗಳಿರುವುದು. ಮಗನಿಗೆ ಅವನಿಷ್ಟದಂತೆಯೇ ನೂತನ ಉದ್ಯೋಗ ದೊರೆಯಲಿದೆ. ಹಣದ ಅಡಚಣೆ ಇರುವುದಿಲ್ಲ.
ಕನ್ಯಾ
ಒಂಟಿತನ ಹೋಗಲಾಡಿಸಿಕೊಳ್ಳಲು ಕೃಷಿ ಕೆಲಸಗಳತ್ತ ಮನಸ್ಸು ಹರಿಸುವುದರಿಂದ ಶೀಘ್ರ ಸಮಾಧಾನ ಸಿಗಲಿದೆ. ಲೆಕ್ಕಾಚಾರವಿಲ್ಲದೇ ಖರ್ಚು ಮಾಡುವುದು, ವ್ಯವಹಾರದಲ್ಲಿ ಔದಾರ್ಯ ತೋರಿಸುವುದು ಸರಿಯಲ್ಲ.
ತುಲಾ
ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಶೈಕ್ಷಣಿಕ ರಂಗದವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ಹಿರಿಯರ ಭೇಟಿಯಿಂದ ಕುಟುಂಬದ ಬಗೆಗಿನ ಹಲವು ವಿಚಾರಗಳು ತಿಳಿಯಲಿವೆ.
ವೃಶ್ಚಿಕ
ಕಫ ಪ್ರಕೃತಿ ಹೊಂದಿದವರಿಗೆ ಶೀತ ತಲೆನೋವಿನಂಥ ಅನಾರೋಗ್ಯ ಎದುರಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಗೊಂದಲಗಳ ನಿವಾರಣೆ ಯಾಗಲಿದ್ದು, ಕಬ್ಬಿಣದ ಕಡಲೆಯಾಗುವುದು.
ಧನು
ಮಂಗಳ ಕಾರ್ಯಗಳ ಶುಭ ಸೂಚನೆಗಳು ಕಂಡುಬರುತ್ತವೆ. ಗೃಹ ನಿರ್ಮಾಣದಂಥ ಕಾರ್ಯ ಕೈಗೊಂಡವರಿಗೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಮನರಂಜನೆಗಾಗಿ ಅಲ್ಪ ಕಾಲ ಮೀಸಲಿಡಲು ಪ್ರಯತ್ನಿಸಿ.
ಮಕರ
ಅಧಿಕಾರಿಗಳು ಹೇಳಿದ್ದೇ ಒಂದು, ನೀವು ಮಾಡಿದ್ದೇ ಒಂದು ಅನ್ನುವಂತೆ ಆಗಬಹುದು. ನೌಕರವರ್ಗದವರಿಗೆ ಹೆಜ್ಜೆ ಹೆಜ್ಜೆಗೂ ವಿವೇಚನೆ ಅಗತ್ಯ. ಅಜೀರ್ಣದ ಸಮಸ್ಯೆ ಎದುರಾಗಲಿದೆ.
ಕುಂಭ
ಸಹಕಾರ ಬಯಸುವವರು ಎದುರಾದಾಗ ಅವರನ್ನು ಅಗೌರವಿಸಬೇಡಿ. ತಾತ್ಕಾಲಿಕ ವೃತ್ತಿಯವರಿಗೆ ಅಭಿವೃದ್ಧಿಯ ಸಂಕೇತ ಕಾಣುವುದು. ಸಾಂಸಾರಿಕ ಸಮಸ್ಯೆಗಳು ಮೌನದಿಂದ ನಿವಾರಣೆಯಾಗುವುದು.
ಮೀನ
ಕೊಂಚ ಎಚ್ಚರ ತಪ್ಪಿ ಕಾರ್ಯ ವಿಳಂಬವಾದರೂ ಅಪವಾದ ಕೇಳಬೇಕಾಗುತ್ತದೆ. ನೆಂಟರಿಷ್ಟರ ಸಲಹೆ ಸೂಚನೆಗಳನ್ನು ಆಲಿಸಿ, ಸನ್ಮಾರ್ಗದಲ್ಲಿ ನಡೆಯಿರಿ. ದೈವಬಲ ಒದಗಿಬಂದು ಅಭಿವೃದ್ಧಿಗೊಳ್ಳುವಿರಿ.