ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ಮಾರುಕಟ್ಟೆಯಿಂದ ಲಾಭ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಸೆಪ್ಟೆಂಬರ್ 2025, 22:30 IST
Last Updated 28 ಸೆಪ್ಟೆಂಬರ್ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿರಂತರ ಉತ್ಸಾಹ, ಹುಮ್ಮಸ್ಸಿನಿಂದಾಗಿ ಹೊಸ ಅವಕಾಶಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕೆಲಸದಲ್ಲಿ ಹರಿತ ಆಯುಧಗಳನ್ನು ಬಳಸುವಾಗ ಜಾಗ್ರತೆ ವಹಿಸಿ.
  • ವೃಷಭ
  • ಯಶಸ್ಸಿಗೆ ಕಾರಣರಾದವರನ್ನು ಮತ್ತು ಹೆಗಲು ಕೊಟ್ಟವರನ್ನು ಕಾರ್ಯ ಮುಗಿಯುವವರೆಗೆ  ಜೊತೆಯಲ್ಲಿ ಇರಿಸಿಕೊಳ್ಳಿ. ಅಧಿಕ ಪ್ರಯತ್ನದಿಂದ ನಿವೇಶನ ಅಥವಾ ಕೃಷಿ ಭೂಮಿ ಖರೀದಿಸುವ ಕನಸು ನನಸಾಗಲಿದೆ.
  • ಮಿಥುನ
  • ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಕಾರ್ಯಕ್ಷೇತ್ರದಲ್ಲಿ ಯಾರೋ ಮಾಡಿದ ತಪ್ಪಿಗೆ ನೀವು ಹೆಗಲುಕೊಡಬೇಕಾದಂತೆ ಆಗಲಿದೆ.
  • ಕರ್ಕಾಟಕ
  • ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಪ್ರಾಪ್ತಿ. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲ ಅಥವಾ ಆಶ್ರಯ ಸಿಗುವುದು. ಬಾಲ್ಯದ ಸ್ನೇಹಿತರ ಭೇಟಿಯಿಂದ ನೆನಪುಗಳು ಮರುಕಳಿಸಲಿವೆ.
  • ಸಿಂಹ
  • ಮಧ್ಯಾಹ್ನದ ನಂತರದಲ್ಲಿ ಷೇರು ವ್ಯವಹಾರಗಳಿಂದ ನಿರೀಕ್ಷಿಸಿದ ಲಾಭ ಬರುವುದು. ಮನೆಗೆ ಹೊಸ ಆಲಂಕಾರಿಕ ವಸ್ತುಗಳನ್ನು ಖರೀದಿಸುವುದರಿಂದ ಹಣ ವ್ಯಯ ಆಗಲಿದೆ. ಶುಭ ಫಲಗಳಿಗಾಗಿ ವಿಷ್ಣು ಸಹಸ್ರ ನಾಮ ಸ್ತೋತ್ರ ಪಠಿಸಿರಿ.
  • ಕನ್ಯಾ
  • ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿ ಅಥವಾ ವಸ್ತು  ಎಚ್ಚರದಿಂದ ತಪ್ಪಿದಲ್ಲಿ ಕಣ್ಮರೆಯಾಗುವುದು. ಲೆಕ್ಕಪತ್ರಗಳು ಪರಿಶ್ರಮ ವಹಿಸಿ ಪೂರೈಸಿದಲ್ಲಿ ಯಶಸ್ಸಿನ ಹಾದಿ ಸುಗಮವಾಗುವುದು.
  • ತುಲಾ
  • ಸಂಬಂಧಿಗಳ ಮನೆಯಲ್ಲಿ ಪರಿಚಯವಾದ ವ್ಯಕ್ತಿಗಳು ನಿಮ್ಮ ಹತ್ತಿರದ ಸಂಬಂಧವಾಗಿ ಬದಲಾಗುವ ಎಲ್ಲಾ ಲಕ್ಷಣಗಳೂ ಇವೆ. ಗುರಿ ಸಾಧಿಸಲು ಕೆಲಸಗಳನ್ನು ಶೀಘ್ರವಾಗಿ, ಪರಿಪೂರ್ಣವಾಗಿ ಮಾಡಿರಿ.
  • ವೃಶ್ಚಿಕ
  • ಮಂಗಳಕರ ಕಾರ್ಯಕ್ರಮ ನಡೆಯುವಾಗ ಜಾಗ್ರತೆ ವಹಿಸಿ. ಅತಿಯಾದ ಆಲಸ್ಯ, ಅಕಾಲದ ನಿದ್ದೆಯನ್ನು ನಿರ್ವಹಣೆ ಮಾಡುವ ಬಗ್ಗೆ ಯೋಚಿಸುವುದು ಆರೋಗ್ಯಕರ.
  • ಧನು
  • ಯಾರಾದರೂ ಹಿತವಲ್ಲದಿದ್ದರೂ ಸಲಹೆ ಕೊಡಲು ಬಂದರೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಸುಮ್ಮನೆ ಕೇಳಿಸಿಕೊಳ್ಳಿ. ಇಂದು ಧಾರ್ಮಿಕ ಕಾರ್ಯಕ್ರಮದ ಕರೆ ಇದ್ದಲ್ಲಿ ತಪ್ಪದೇ ಭೇಟಿ ನೀಡಿ.
  • ಮಕರ
  • ವಿದ್ಯೆ ಹೇರಳವಾಗಿದ್ದರೂ ವಿನಯದ ಕೊರತೆ ಇದ್ದಲ್ಲಿ ಪಾಂಡಿತ್ಯಕ್ಕೆ ಬೆಲೆ ಸಿಗದೆ ಹೋಗಬಹುದು. ವೈರುಧ್ಯಗಳನ್ನು ಮೀರಿ ವ್ಯವಹರಿಸಿದಲ್ಲಿ ಸಂಬಂಧವು ಉಳಿಯಲಿದೆ. ಹಾಕಿದ ಯೋಜನೆಗಳು ಸಫಲವಾಗಲಿವೆ.
  • ಕುಂಭ
  • ಯುವಕ ಯುವತಿಯರಿಗೆ ಸುತ್ತಮುತ್ತ ನಡೆಯುವ ಕೆಲವು ಘಟನೆಗಳಿಂದ ದೇಶಭಕ್ತಿಯು ಗರಿಗೆದರಬಹುದು. ವಿಶೇಷ ಕುಶಲತೆಯನ್ನು ಹೊಂದಿದ ಅಂಗವಿಕಲರಿಗೆ ಪ್ರಶಸ್ತಿ ಸಿಗಬಹುದು.
  • ಮೀನ
  • ಕಣ್ಣಿಗೆ ಹಿತವೆನ್ನಿಸುವುದ್ದೆಲ್ಲವನ್ನು ತಿನ್ನುವ ಪ್ರವೃತ್ತಿಯಿಂದ ಜೀರ್ಣಾಂಗ ವ್ಯೂಹ ಕಾರ್ಯನಿರ್ವಹಿಸದೆ ಇರುವುದು  ಗಮನಕ್ಕೆ ಬರಲಿದೆ. ಈಶ್ವರನ ಕೃಪೆಯಿಂದ ನಡೆಯುತ್ತಿರುವ ಕೆಲಸದಲ್ಲಿ ಔನ್ನತ್ಯವು ನಿಶ್ಚಿತವಾದದ್ದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.