ADVERTISEMENT

ದಿನ ಭವಿಷ್ಯ: ಈ ರಾಶಿಯ ಉದ್ಯಮಿಗಳಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ

ಜುಲೈ 03 ಬುಧವಾರ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಜುಲೈ 2024, 22:45 IST
Last Updated 2 ಜುಲೈ 2024, 22:45 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಆತ್ಮೀಯರಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತ ಸಮಯ ದೊರಕುವುದು. ಅತಿ ಆಲಸ್ಯ, ಬೇಜವಾಬ್ದಾರಿತನ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಆರೋಗ್ಯದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು.
  • ವೃಷಭ
  • ಧಾರ್ಮಿಕ ಕೆಲಸಗಳಿಗಾಗಿ ಖರ್ಚುಗಳಿದ್ದರೂ ದೈವಬಲದಿಂದ ಎಲ್ಲಾ ವ್ಯವಹಾರಗಳಲ್ಲಿ ಉತ್ತಮ ಧನ ಆದಾಯವನ್ನು ಹೊಂದುವಿರಿ. ಮನೆಯಲ್ಲಿರುವ ಸಣ್ಣ ಮಕ್ಕಳ ಕೆಲವು ಮಾತುಗಳು ಶಿರೋವೇದನೆಗೆ ಕಾರಣವಾಗುವುದು.
  • ಮಿಥುನ
  • ಮೇಲಧಿಕಾರಿಗಳು ಹಾಗೂ ಹಿರಿಯರಿಂದ ಬಯಸಿದ ಉಪಕಾರವನ್ನು ಪಡೆಯಬಹುದು. ಚಿಕಿತ್ಸೆಗಳನ್ನು ತಪ್ಪಿಸದೆ ತೆಗೆದುಕೊಳ್ಳಿರಿ. ಹಳೆಯ ಸಮಸ್ಯೆಗಳೇ ಹೊಸ ರೂಪವನ್ನು ಪಡೆದು ಬರುವವು.
  • ಕರ್ಕಾಟಕ
  • ನಾಟಕ ಅಥವ ಸಿನಿಮಾದಲ್ಲಿ ನಟನೆ ಮಾಡುವಂಥವರಿಗೆ ಉತ್ತಮ ಅವಕಾಶಗಳ ಜತೆ ಹೆಸರು ಬರಲಿದೆ. ಭೇದ-ಭಾವ, ತಾರತಮ್ಯದ ಮಾತುಗಳು ಆಡುವುದನ್ನು ಕಡಿಮೆ ಮಾಡಿ. ಪುಣ್ಯಕ್ಷೇತ್ರಗಳಿಗೆ ಹೋಗಿಬರುವ ಸಾಧ್ಯತೆಗಳಿವೆ.
  • ಸಿಂಹ
  • ಸಂತಾನ ಪ್ರಾಪ್ತಿಯಾಗಲಿದ್ದು ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುವಂತಾಗುತ್ತದೆ. ಆತ್ಮ ವಿಶ್ವಾಸ ಹೆಚ್ಚಿಸಿ ಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಹೋಗುವಿರಿ. ಹಾಳು ವ್ಯಸನಗಳಿಗೆ ಒಳಗಾಗುವ ಪರಿಸ್ಥಿತಿ ತಪ್ಪಿಸಿಕೊಳ್ಳಿರಿ.
  • ಕನ್ಯಾ
  • ಹೊಸದನ್ನು ಸಾಧಿಸುವ ಪ್ರಚೋದನೆ ನಿಮ್ಮನ್ನು ಸೆಳೆಯಲಿದೆ. ಈಗ ನಡೆಯುತ್ತಿರುವ ಕೆಲಸ ಕಾರ್ಯಗಳು ನಿಲ್ಲುವಂತಾಗಬಹುದು. ಶಿಸ್ತುಬದ್ಧ ನಿಯಮದ ಆಹಾರದಿಂದ ಆರೋಗ್ಯ ವೃದ್ಧಿಯಾಗುವುದು.
  • ತುಲಾ
  • ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿಕೊಂಡು ಸಂಬಂಧಿಗಳಲ್ಲಿ ಇಲ್ಲಸಲ್ಲದ ವಿಚಾರಗಳಿಗೆ ಜಗಳನ್ನು ತೆಗೆಯದಿರಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಯೋಗಾಭ್ಯಾಸ ಅಥವಾ ಧ್ಯಾನ ಮಾಡುವುದನ್ನು ಅಭ್ಯಸಿಸಿ.
  • ವೃಶ್ಚಿಕ
  • ವಂಶದ ಕುಡಿಯು ನೀವು ಬಯಸಿದ ರೀತಿಯಲ್ಲಿಯೇ ಉತ್ತಮ ಜೀವನ ನಡೆಸುತ್ತಿರುವುದನ್ನು ಜನರು ಹೊಗಳುವುದು ಕೇಳಿ ಆನಂದ ಹೊಂದುವಿರಿ. ಉದ್ಯಮಿಗಳಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ.
  • ಧನು
  • ಅತ್ಯಂತ ಸೂಕ್ಷ್ಮ ಮನಸ್ಕರಾಗಿರುವ ನಿಮಗೆ ಇತರರು ಹೇಳ ಬಹುದಾದ ಮಾತುಗಳನ್ನು ಸ್ವೀಕರಿಸುವಂಥ ಸಾಮರ್ಥ್ಯ ಇಲ್ಲವಾಗುವುದು. ಇನ್ನೊಬ್ಬರಿಗೆ ಹೇಳಿಕೊಡುವ ಮುಂಚೆ ನಿಮ್ಮ ಜ್ಞಾನವು ಎಷ್ಟಿದೆ ಎಂದು ತಿಳಿಯಿರಿ.
  • ಮಕರ
  • ವಿದ್ಯುತ್ ಉಪಕರಣಗಳನ್ನು ಸರಿ ರೀತಿಯಲ್ಲಿ ಬಳಸದೇ ಇರುವುದರಿಂದ ಅಪಾಯಗಳು ಉಂಟಾಗಬಹುದು. ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳಲ್ಲಿ ತೊಡಗುವಿರಿ. ದುರ್ಗಾಪರಮೇಶ್ವರಿಯ ಆರಾಧನೆಯಿಂದ ಶುಭ.
  • ಕುಂಭ
  • ನಿನ್ನೆ ಇದ್ದಂಥ ವಸ್ತುಗಳು ಇಂದು ಕಾಣೆಯಾಗುವುದು. ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯ ಮೇಲೆ ಅನುಮಾನವನ್ನು ತರಿಸುತ್ತದೆ. ವಿದೇಶಿ ಸಂಪರ್ಕಗಳಿಂದ ಉತ್ತಮ ಪ್ರಯೋಜನವು ಆಗಲಿದೆ. ಕೈಗಳ ಸ್ವಚ್ಚತೆಯ ಮೇಲೆ ಗಮನ ಹರಿಸಿ.
  • ಮೀನ
  • ಕುಟುಂಬದವರ ಜೊತೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಮಾತನಾಡಿ ಬಗೆಹರಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ಕಾಣುವ ಸಾಧ್ಯತೆ ಇದೆ. ಇತರರ ವಿಷಯದಲ್ಲಿ ತಲೆ ಹಾಕದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.