ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ `ಸಿರಿಗೇರಿ~ ಗ್ರಾಮ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಐತಿಹಾಸಿಕವಾಗಿ, ರಾಜಕೀಯವಾಗಿ ತನ್ನದೇ ಆದ ಸ್ಥಾನ ಪಡೆದಿದೆ.
ಗ್ರಾಮದ ಅಧಿದೇವತೆ `ಸಿರಿಗೇರಮ್ಮ~. ಈ ದೇವಿಯ ಆರಾಧನೆಯಿಂದಲೇ ಗ್ರಾಮಕ್ಕೆ `ಸಿರಿಗೇರಿ~ ಎಂಬ ಹೆಸರು ಬಂದಿರಬಹುದು ಎಂಬ ಪ್ರತೀತಿ.
ಹಾಗೆಯೇ ಶ್ರಿ ನಾಗನಾಥೇಶ್ವರ ದೇವಾಲಯ ಕೂಡ ಇಲ್ಲಿದೆ. ಇದರಲ್ಲಿ ಪೂರ್ವಾಭಿಮುಖ ಈಶ್ವರನ ವಿಗ್ರಹವಿದೆ. ಗ್ರಾಮದಲ್ಲಿ ಶಂಭುಲಿಂಗ, ಬಸವಣ್ಣ, ಅಕ್ಕ-ತಂಗಿ, ಶ್ರಿ ವೀರಭದ್ರ ದೇವಾಲಯಗಳ ಜೊತೆ ದ್ಯಾವಮ್ಮ, ಮಾರಮ್ಮ, ಆಂಜನೇಯ ದೇವಾಲಯಗಳು ಇವೆ.
ಇದೇ ತಿಂಗಳ 29ರ ಚೈತ್ರಶುದ್ಧ ಸಪ್ತಮಿ ದಿನದಂದು ಶ್ರಿ ನಾಗನಾಥೇಶ್ವರನ ಮತ್ತು ಮಾರ್ಚ್ 31 ರಂದು ಸಿರಿಗೇರಮ್ಮನ ಜಾತ್ರೆಗಳು ಅದ್ಧೂರಿಯಾಗಿ ನಡೆಯುತ್ತವೆ.
ಸುತ್ತಲಿನ ಸಿದ್ದರಾಂಪುರ, ದಾಸಾಪುರ, ಕೊಂಚಿಗೇರಿ, ಮುದ್ದಟನೂರು, ಗುಂಡಿಗನೂರು, ಹಾವಿನಹಾಳು ಮುಂತಾದ ಗ್ರಾಮಗಳ ಸಹಸ್ರಾರು ಭಕ್ತರು ಈ ಎರಡೂ ಜಾತ್ರೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಅಶೋಕನ ಶಿಲಾಶಾಸನಗಳಿರುವ ಉಡೇಗೋಳದಿಂದ ಇಲ್ಲಿಗೆ ಕೇವಲ 7 ಕಿಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.