ADVERTISEMENT

ದಾಂಡೇಲಿ ಪ್ರವಾಸ: ಇಲ್ಲಿಗೆ ಹೋದಾಗ ನೀವು ನೋಡಲೇಬೇಕಾದ ಪ್ರಮುಖ ಸ್ಥಳಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2025, 12:34 IST
Last Updated 25 ನವೆಂಬರ್ 2025, 12:34 IST
<div class="paragraphs"><p>ಚಿತ್ರ:ಎಐ</p></div>
   

ಚಿತ್ರ:ಎಐ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದಟ್ಟವಾದ ಅರಣ್ಯ, ವನ್ಯಜೀವಿಗಳು ಹಾಗೂ ಕಾಳಿ ನದಿಯ ವಾಟರ್ ರಾಫ್ಟಿಂಗ್, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮುಖ್ಯವಾಗಿ ಡಾಂಡೇಲಿಗೆ ಭೇಟಿ ನೀಡುವವರು ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಬೇಕು. ಹಾಗಾದರೆ ಆ ಸ್ಥಳಗಳು ಯಾವುವು ಎಂಬುದನ್ನು ತಿಳಿಯೋಣ. 

ಸಾಹಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾದ ದಾಂಡೇಲಿ ಹಾರ್ನ್‌ಬಿಲ್‌ಗಳ ಪ್ರಮುಖ ತಾಣವಾಗಿದೆ. ದಾಂಡೇಲಿಯ ಕಾಡುಗಳಲ್ಲಿ 4 ಬಗೆಯ ಹಾರ್ನ್‌ಬಿಲ್‌ಗಳಿದ್ದು, ಇವು ಇಲ್ಲಿನ ಪ್ರಮುಖ ವನ್ಯಜೀವಿಗಳಾಗಿವೆ. 

ADVERTISEMENT

ದಾಂಡೇಲಿ ವನ್ಯಜೀವಿ ಅಭಯಾರಣ್ಯ: 

ಕರ್ನಾಟಕದ ಎರಡನೇ ಅತಿ ಡೊಡ್ಡ ಅಭಯಾರಣ್ಯವಾಗಿದೆ. ಕಾಳಿ ನದಿಯ ದಡದಲ್ಲಿ ಈ ಅಭಯಾರಣ್ಯವಿದೆ. ಇಲ್ಲಿನ ಪರಿಸರ ಪ್ರವಾಸಿಗರಿಗೆ ಭಿನ್ನ ಅನುಭವ ನೀಡುತ್ತದೆ. ಈ ಅಭಯಾರಣ್ಯದಲ್ಲಿ ಹುಲಿ, ಆನೆ, ಕಾಡು ನಾಯಿ ಹಾಗೂ ಹಾರ್ನ್‌ಬಿಲ್‌ನಂತಹ ವನ್ಯಜೀವಿಗಳಿವೆ. ದಟ್ಟ ಕಾಡಿನಲ್ಲಿ ವಿವಿಧ ಬಗೆಗೆ ಸಸ್ಯವರ್ಗಗಳಿವೆ. ಸುಂದರ ಪರಿಸರದಲ್ಲಿ ಸಮಯ ಕಳೆಯಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.  

ಮೌಲಂಗಿ ಉದ್ಯಾನವನ:

ಮೌಲಂಗಿ ಉದ್ಯಾನವನ ದಾಂಡೇಲಿಯಿಂದ 7 ಕಿ.ಮೀ ದೂರದಲ್ಲಿದೆ. ಈ ಉದ್ಯಾನದಲ್ಲಿ ಬಿದಿರು, ಎತ್ತರವಾದ ಬಂಡೆಗಳು ಹಾಗೂ ಕಾಳಿ ನದಿಯ ದಡವಿದೆ. ಇಲ್ಲಿ ಪ್ರವಾಸಿಗರು ಚಾರಣ, ಬಂಡೆ ಹತ್ತುವುದು, ಬೋಟಿಂಗ್‌ನಂತಹ ಚಟುವಟಿಕೆ ಮಾಡಬಹುದು. 

ಶಿರೋಲಿ ಶಿಖರ:

ದಾಂಡೇಲಿ ಪ್ರವಾಸದ ಪ್ರಮುಖ ಆಕರ್ಷಣೆಯಲ್ಲಿ ಶಿರೋಲಿ ಶಿಖರ ಕೂಡಾ ಒಂದಾಗಿದೆ. ಸಹ್ಯಾದ್ರಿ ಶ್ರೇಣಿಯ ಸಾಲಿನಲ್ಲಿರುವ ಈ ಶಿಖರ ಮಂಜಿನಿಂದ ಆವೃತವಾಗಿರುತ್ತದೆ. ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಇಲ್ಲಿಂದ ನೋಡಬಹುದು. ಜೊತೆಗೆ ಹಚ್ಚ ಹಸಿರು ಶಿಖರಕ್ಕೆ ಇನ್ನಷ್ಟು ಮೇರುಗು ನೀಡುತ್ತದೆ. 

ಸಥೋಡಿ ಜಲಪಾತ:

ಈ ಜಲಪಾತವನ್ನು ಮಿನಿ ನಯಾಗರಾ ಎಂತಲೂ ಕರೆಯುತ್ತಾರೆ. ಇಲ್ಲಿ15 ಮೀ ಎತ್ತರದಿಂದ ಜಲಪಾತ ಬೀಳುತ್ತದೆ. ಇಲ್ಲಿನ ನೀರಿನಲ್ಲಿ ಈಜಬಹುದು. ಚಿಕ್ಕ ಜಲಪಾತವಾದರೂ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. 

ದಾಂಡೇಲಪ್ಪ ದೇವಸ್ಥಾನ:

ದಾಂಡೇಲಪ್ಪ ದೇವಸ್ಥಾನವು ಪ್ರಮುಖ ದೇವಾಸ್ಥಾನವಾಗಿದೆ. ಇದು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ದಾಂಡೇಲಿಗೆ ಭೇಟಿ ನೀಡಿದಾಗ ಈ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.