ADVERTISEMENT

ಸ್ನೇಹಸಂಗಕ್ಕೊಂದು ಸಮುದಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:30 IST
Last Updated 4 ಡಿಸೆಂಬರ್ 2019, 19:30 IST
ಆರ್‌ಟಿಸಿ
ಆರ್‌ಟಿಸಿ   

ಪರಿಚಯದವರು, ಕುಟುಂಬದವರ ಜತೆ ಪ್ರವಾಸ ಹೋಗುವುದು ಸಾಮಾನ್ಯ. ಈಗೀಗ ಪ್ರವಾಸ ಹೊಸ ಸ್ವರೂಪ ಪಡೆದುಕೊಂಡಿದೆ. ತಾಣಗಳ ಜತೆಗೆ ಜನರನ್ನು ಪರಿಚಯ ಮಾಡಿಕೊಳ್ಳಲೂ ಪ್ರವಾಸ ಕೈಗೊಳ್ಳುವುದು ಒಂದು ರೀತಿಯ ಟ್ರೆಂಡ್ ಆಗಿದೆ. ಅಂತಹ ಸುತ್ತಾಟಗಳ ಸಂಗಕ್ಕೆ ಇಲ್ಲೊಂದು ಸಮುದಾಯ ಇದೆ. ದೇಶದ ವಿವಿಧ ತಾಣಗಳನ್ನು ರಸ್ತೆ ಪ್ರವಾಸಗಳ ಮೂಲಕ ಅನ್ವೇಷಿಸಲು ‘ದಿ ರೋಡ್ ಟ್ರಿಪ್ಸ್ ಕೊ’ (TheRoadtripsCo) ಸುತ್ತಾಟಗಳನ್ನು ಆಯೋಜಿಸುತ್ತದೆ. ಕುಟುಂಬದವರು, ಜೋಡಿಗಳು, ಒಂಟಿಯಾನಿಗಳು, ಸ್ನೇಹಿತರ ಜತೆಗೆ ಸಾಕುಪ್ರಾಣಿ ಪ್ರಿಯರು ಸಹ ಸುತ್ತಾಟಗಳಲ್ಲಿ ಭಾಗಿಯಾಗಬಹುದು.

ಆರ್‌ಟಿಸಿ, ಕೇವಲ ಪ್ರವಾಸ ಮಾಡುವುದಷ್ಟೆ ಅಲ್ಲದೆ, ಬಳಿಕ ಸದಸ್ಯರು ಜತೆ ಸೇರಿ ಪರಸ್ಪರ ತಮ್ಮ ಅನುಭವ, ಅಭಿರುಚಿ ಹಂಚಿಕೊಳ್ಳಲು ಸಹ ಪ್ರೋತ್ಸಾಹ ನೀಡುತ್ತದೆ. ಬೆಂಗಳೂರು, ಮೈಸೂರಿನಲ್ಲೂ ಆರ್‌ಟಿಸಿ ಗುಂಪುಗಳಿವೆ. ಮುಂಬರುವ ಪ್ರವಾಸಗಳ ವಿವರಗಳು http://www.roadtrippersclub.com/ ಈ ವೆಬ್ ಸೈಟ್‌ನಲ್ಲಿ ಲಭ್ಯ ಇವೆ.

ಇರುಳಲ್ಲಿ ಸೈಕಲ್ ಯಾನ

ADVERTISEMENT

ಡಿ.7ರಂದು ಮುಂಬೈನಲ್ಲಿ ರಾತ್ರಿ ವೇಳೆ ಸೈಕಲ್ ಯಾನ ಆಯೋಜಿಸಲಾಗಿದೆ. ರಾತ್ರಿ 11.30ಕ್ಕೆ ಆರಂಭವಾಗಿ ಡಿ.8ರ ಬೆಳಗ್ಗೆ 6ಕ್ಕೆ ಯ‌ಾನ ಕೊನೆಗೊಳ್ಳಲಿದೆ. ಸಂಚಾರ ದಟ್ಟಣೆ ಇಲ್ಲದ ದಕ್ಷಿಣ ಮುಂಬೈನಲ್ಲಿ ಸುತ್ತಾಡಲು ಬಯಸುವುದಾದರೆ ಸೈಕಲ್ ಏರಲು ಸಿದ್ಧರಾಗಬಹುದು.

ಮಾಹಿತಿ: ರಾಧಿಕಾ ಎನ್. ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.