ಗ್ಯಾಂಗ್ಟಕ್: ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬಂಗೀ ಜಂಪ್ ಅನ್ನು ಆರಂಭಿಸುವುದಾಗಿ ಹಿಮಾಲಯ ಪ್ರದೇಶದ ಸಿಕ್ಕಿಂ ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ.
ಸಿಕ್ಕಿಂ ಸಿಂಗಶೋರ್ ಸೇತುವೆಯಲ್ಲಿ ಬಂಗೀ ಜಂಪ್ ಆಯೋಜಿಸಲಾಗುತ್ತಿದೆ. ಇದು 100 ಮೀಟರ್ ಎತ್ತರದಲ್ಲಿದೆ. ಹಾಗೆಯೇ 240 ಮೀಟರ್‌ನಷ್ಟು ಉದ್ದ ತೂಗಲಿದೆ. ಸಿಕ್ಕಿಂನಲ್ಲಿ ಇದು ಅತಿ ಎತ್ತರದ ಸೇತುವೆಯಾಗಿದೆ. ಬಂಗೀ ಜಂಪ್‌ಗೆ ಇಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗಿದೆ ಎಂದು ರಸ್ತೆ ಹಾಗೂ ಸೇತುವೆ ಸಚಿವ ಎನ್.ಬಿ. ದಹಾಲ್ ತಿಳಿಸಿದ್ದಾರೆ.
ಸಿಕ್ಕಿಂ ಗ್ರಾಮೀಣ ಪ್ರವಾಸೋದ್ಯಮ ಕಾರ್ಯಕ್ರಮವು ಮಾರ್ಚ್ 22ರಿಂದ 25ರವರೆಗೆ ಸಿಕ್ಕಿಂನ ಪಶ್ಚಿಮ ಭಾಗದ ಉತ್ತರೆಯಲ್ಲಿ ಆಯೋಜನೆಗೊಂಡಿದೆ. ಈ ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ಬಾಗ್ದೊರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುವವರಿಗೆ ಸ್ಥಳೀಯ ಸಾಂಪ್ರದಾಯಿಕ ಸ್ವಾಗತದ ನಂತರ, ಹೋಮ್‌ಸ್ಟೇಗಳಲ್ಲಿ ತಂಗಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ವ್ಯವಹಾರ ಕುರಿತು ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಾರಣ, ಗುಡ್ಡಗಾಡಿನಲ್ಲಿ ಸೈಕಲ್ ಚಾಲನೆ, ಪ್ಯಾರಾಗ್ಲೈಡಿಂಗ್ ಮತ್ತು ಸೊಫಿಯುಮ್‌ನಿಂದ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಇದರೊಂದಿಗೆ ಕರಕುಶಲ ವಸ್ತುಗಳು, ಸಾವಯವ ಪದಾರ್ಥಗಳು ಮತ್ತು ಸಮುದಾಯದ ಪಾಲುದಾರಿಕೆಯ ಪ್ರದರ್ಶನಗಳು ಇರಲಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.