
ಚಳಿಗಾಲ
ಮುಂಬೈ: ಭಾರತದಲ್ಲಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರವಾಸಕ್ಕೆ ಹೋಗಬೇಕೆಂಬ ಮೈ–ಮನಸ್ಸುಗಳೂ ಗರಿಗೆದರುತ್ತವೆ. ಇದಕ್ಕೆ ಕಾರಣ ಬಹುತೇಕ ಭಾರತದಲ್ಲಿ ಪ್ರವಾಸಕ್ಕೆ ಚಳಿಗಾಲ ಅನುಕೂಲಕರ ವಾತಾವರಣ ಕಲ್ಪಿಸಿಕೊಡುತ್ತದೆ ಎನ್ನುವ ನಂಬಿಕೆ.
ಈ ಬಗ್ಗೆ ಖಾಸಗಿ ಸಂಸ್ಥೆಯೊಂದು ಆಸಕ್ತಿಕ ಸಂಗತಿಗಳನ್ನು ಹಂಚಿಕೊಂಡಿದ್ದು ಭಾರತದಲ್ಲಿ ಚಳಿಗಾಲದ ಪ್ರವಾಸೋದ್ಯಮದ ಬಗ್ಗೆ ಗಮನ ಸೆಳೆಯುವಂತಿವೆ.
Airbnb– Focaldata ಎಂಬ ಪ್ರವಾಸೋದ್ಯಮದ ಸಂಸ್ಥೆ ವರದಿ ಹಂಚಿಕೊಂಡಿದ್ದು, ಆ ಪ್ರಕಾರ ಶೇ 55 ರಷ್ಟು ಭಾರತೀಯರು ಚಳಿಗಾಲದಲ್ಲೇ ಪ್ರವಾಸವನ್ನು ಯೋಜಿಸುತ್ತಾರೆ ಎಂದು ತಿಳಿಸಿದೆ.
ಈ ಶೇ 55ರಲ್ಲಿ Zen G (ಜನರೇಷನ್ ಜಿ) ಅವರೇ ಅಂದರೆ ನವ ಯುವಕ–ಯುವತಿಯರೇ ಅರ್ಧದಷ್ಟು ಇದ್ದಾರೆ ಎಂಬುದಾಗಿ ತಿಳಿಸಿದೆ.
ಇನ್ನೂ ವಿಶೇಷ ಎಂದರೆ ಚಳಿಗಾಲದಲ್ಲಿ ಪ್ರವಾಸ ಹೋರಡುವವ ಹೆಚ್ಚಿನವರಿಗೆ ಗೋವಾ ಹಾಗೂ ಕೇರಳ ತಾಣಗಳೇ ಹಾಟ್ ಫೇವರಿಟ್ ಎಂದು ಕಂಡುಕೊಂಡಿದೆ.
ಗೋವಾ, ಕೇರಳ ಹೊರತುಪಡಿಸಿದರೆ ಭಾರತೀಯರು ಚಳಿಗಾಲದಲ್ಲಿ ಹಿಮಾಲಯದ ತಪ್ಪಲಿನ ರಾಜ್ಯಗಳಿಗೆ ಹಾಗೂ ರಾಜಸ್ಥಾನಕ್ಕೆ ಹೋಗುತ್ತಾರೆ ಎಂದು ತಿಳಿಸಿದೆ.
ಗಮನಿಸಬೇಕಾದ ಸಂಗತಿ ಎಂದರೆ ಯುವ ಸಮೂಹವೂ ಇತ್ತೀಚೆಗೆ ವಾರಾಣಸಿ, ಅಯೋಧ್ಯೆ, ರಾಮೇಶ್ವರಂ ಅಂತಹ ಧಾರ್ಮಿಕ ತಾಣಗಳ ತೀರ್ಥಯಾತ್ರೆ ಕೈಗೊಳ್ಳುವುದು ಹೆಚ್ಚಾಗುತ್ತಿದೆ ಎಂದು ಬಹಿರಂಗಪಡಿಸಿದೆ.
ಹೀಗೆ ಚಳಿಗಾಲದಲ್ಲಿ ಭಾರತದಲ್ಲಿ ಪ್ರವಾಸ ಕೈಗೊಳ್ಳುವವರು ಹೆಚ್ಚಾಗಿ ವಿಶ್ರಾಂತಿ–ಹೊಸ ಸ್ಥಳಗಳನ್ನು ನೋಡಲು ಬಯಸುವವರೇ ಆಗಿರುತ್ತಾರೆ. ಅದರಲ್ಲೂ ಸಂಗಾತಿ ಜೊತೆಗೆ ಪ್ರವಾಸ ಹೋಗುವವರು ಹೆಚ್ಚು ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.