ADVERTISEMENT

ಅಮೆರಿಕನ್ ಜಾಜ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಚೆನ್ನೈಯ ಅಮೆರಿಕ ಕಾನ್ಸಲರ್ ಕಚೇರಿ `ದಿ ರಿದಮ್ ರೋಡ್~ ಯೋಜನೆಯ ಅಂಗವಾಗಿ ಶನಿವಾರ ಅಮೆರಿಕದ ಜಾಜ್ ತಂಡ `ಪಾಲ್ ಬಾಡ್ರಿ ಮತ್ತು ಪಾಥ್‌ವೇಸ್~ನಿಂದ ಜಾಜ್ ಸಂಗೀತ ಕಛೇರಿ ಏರ್ಪಡಿಸಿದೆ.

ಜಾಜ್ ಹಾಗೂ ಬ್ಲೂಸ್ ಪರಂಪರೆಯಲ್ಲಿ ಬೇರುಗಳನ್ನು ಹೊಂದಿರುವ ಪಾಲ್ ಬ್ರಾಡಿ ಹಾಗೂ ಪಾಥ್‌ವೇಸ್ ಸ್ಥಾಪನೆಯಾಗಿದ್ದು 2008ರಲ್ಲಿ. ಮೂಲ ರಚನೆ ಹಾಗೂ ಜಾಜ್ ಶೈಲಿಯ ಹರವಿನಲ್ಲಿ ಕಂಡುಬರುವ ಶ್ರೇಷ್ಠ ಸಾಲುಗಳನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ಈ ತಂಡದ ವೈಶಿಷ್ಟ್ಯ. ಅದ್ಭುತ ತಾಳ, ಹೃದಯ ತಟ್ಟುವ ಮಾಧುರ್ಯ, ಉಲ್ಲಾಸಗೊಳಿಸುವ ಸಮ್ಮೊಹಕ ಸಂಗೀತದಿಂದ ಬೆಂಗಳೂರು ಜನರ ಮನತಣಿಸಲು ಈ ತಂಡ ಬರುತ್ತಿದೆ.

 `ದಿ ರಿದಮ್ ರೋಡ್~ ಎರಡು ದೇಶಗಳ ಜನರನ್ನು ಸಂಗೀತ ಮತ್ತು ಸಾಂಸ್ಕೃತಿಕ ಸಂಬಂಧದ ಮೂಲಕ ಬೆಸೆಯುವ ಯತ್ನ. ಅಮೆರಿಕದ ಪಾರಂಪರಿಕ ಸಂಗೀತ ನಮೂನೆಗಳನ್ನು 21ನೇ ಶತಮಾನದಲ್ಲಿ ಬಿಂಬಿಸುವ ಪ್ರಮುಖ ಕಾರ್ಯಕ್ರಮ ಎಂದೇ `ದಿ ರಿದಮ್ ರೋಡ್~ನ್ನು ಗುರುತಿಸಲಾಗಿದೆ. ಈವರೆಗೂ 41 ತಂಡಗಳ 159 ಸಂಗೀತಗಾರರು ಈ ಕಾರ್ಯಕ್ರಮವನ್ನು ವಿಶ್ವದ ಐದು ಖಂಡಗಳ 100ಕ್ಕೂ ಹೆಚ್ಚು ದೇಶಗಳಿಗೆ ಕೊಂಡೊಯ್ದಿದ್ದಾರೆ.

ಪ್ರವೇಶ ಉಚಿತ. ಪ್ರವೇಶದ ಪಾಸುಗಳನ್ನು ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್, ಬಿಫ್ಲಾಟ್, ಕೌಂಟರ್ ಕಲ್ಚರ್ ಮತ್ತು ಭಾರತೀಯ ವಿದ್ಯಾಭವನದಲ್ಲಿರುವ ಅಮೆರಿಕನ್ ಕಾರ್ನರ್‌ನಲ್ಲಿ ಪಡೆಯಬಹುದು. ಶನಿವಾರ ಬೆಳಿಗ್ಗೆಯಿಂದ ಸಂಜೆ 6ರ ವರೆಗೆ ಸಭಾಂಗಣದಲೂ ಪಾಸ್‌ಗಳು ಲಭ್ಯ.

ಸ್ಥಳ: ಗುಡ್‌ಶೆಪರ್ಡ್ ಸಭಾಂಗಣ,ರೆಸಿಡೆನ್ಸಿ ರಸ್ತೆ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.