ADVERTISEMENT

ಕಾಸರವಳ್ಳಿ ಚಿತ್ರೋತ್ಸವದಲ್ಲಿ...

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST
ಕಾಸರವಳ್ಳಿ ಚಿತ್ರೋತ್ಸವದಲ್ಲಿ...
ಕಾಸರವಳ್ಳಿ ಚಿತ್ರೋತ್ಸವದಲ್ಲಿ...   

ಗಿರೀಶ್ ಕಾಸರವಳ್ಳಿ ಕನ್ನಡದ ಹೊಸಅಲೆಯ ಚಿತ್ರಗಳ ಪ್ರಮುಖ ನಿರ್ದೇಶಕರು. ಅವರು ನಿರ್ದೇಶಿಸಿದ ಹಲವು ಚಿತ್ರಗಳು ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೂ ಮೈಲುಗಲ್ಲಾಗಿವೆ.

ಜಾಗತಿಕ ಚಿತ್ರೋದ್ಯಮವೂ ಗುರುತಿಸುವಷ್ಟು ಖ್ಯಾತಿ ಗಳಿಸಿದ ನಿರ್ದೇಶಕ ಅವರು. ತೇಜಸ್ವಿ, ಭೈರಪ್ಪ, ವೈದೇಹಿ ಹೀಗೆ ಕನ್ನಡದ ಪ್ರಮುಖ ಸಾಹಿತಿಗಳ ಮಹತ್ವದ ಕೃತಿಗಳನ್ನು ಅವರು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ಕಾಸರವಳ್ಳಿ ಅವರಿಗೆ ಪದ್ಮಶ್ರೀ ಮತ್ತು 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆ.ವಿ. ಸುಬ್ಬಣ್ಣ ಆಪ್ತ ಸಮೂಹ, ಸುಚಿತ್ರ ಫಿಲಂ ಸೊಸೈಟಿ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಜೂನ್ 16ರ ವರೆಗೆ `ಗಿರೀಶ್ ಕಾಸರವಳ್ಳಿ ಚಲನಚಿತ್ರೋತ್ಸವ~ ನಡೆಯುತ್ತಿದೆ.

ಶನಿವಾರ ಸಂಜೆ 6.30ಕ್ಕೆ `ಆಕ್ರಮಣ~, ಭಾನುವಾರ ಬೆಳಿಗ್ಗೆ 11ಕ್ಕೆ `ತಬರನ ಕತೆ~, ಸಂಜೆ 6.30ಕ್ಕೆ `ಮನೆ~ ಮತ್ತು ಸೋಮವಾರ ಸಂಜೆ 6.30ಕ್ಕೆ `ಕ್ರೌರ್ಯ~ ಚಿತ್ರ ಪ್ರದರ್ಶನ.

ಸ್ಥಳ: ಕೆ..ವಿ. ಸುಬ್ಬಣ್ಣ ಆಪ್ತ ರಂಗ ಮಂದಿರ, 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ 1ನೇ ಹಂತ, ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನದ ಎದುರು. ದೂ: 92425 52323  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.