ಕೆನಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಅಂದು ಹಬ್ಬದ ವಾತಾವರಣ. ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮ. ಅಂದು ಪದವಿ ದಿನವಾದ್ದರಿಂದ ವಿದ್ಯಾರ್ಥಿಗಳಿಗೆ ಖುಷಿಯ ಜತೆಗೆ ನೋವೂ ಇತ್ತು.
‘ನನ್ನ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿದ ಎಲ್ಲಾ ಶಿಕ್ಷಕರಿಗೂ ವಂದಿಸುತ್ತೇನೆ. ಸ್ನೇಹಿತರು ಮತ್ತು ಶಿಕ್ಷಕರ ಬೆಂಬಲದಿಂದ ನಾನು ಓದು, ಕ್ರೀಡೆ ಎರಡರಲ್ಲೂ ಸಮತೋಲನ ಕಂಡುಕೊಳ್ಳಲು ಸಹಾಯಕವಾಯಿತು; ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಇವರನ್ನೆಲ್ಲಾ’ ಎಂದು ಖುಷಿಯ ಜತೆಗೆ ಬೇಸರ ವ್ಯಕ್ತಪಡಿಸಿದರು ಐಬಿ2 ವಿದ್ಯಾರ್ಥಿ ನಿಖಿಲ್ ಮೋಹನ್.
‘ಇದು ಖುಷಿ, ಬೇಸರ ಎರಡು ಆಗುವ ಸಂದರ್ಭ. ಮೂರು ವರ್ಷದ ಪದವಿ ಜೀವನ ಮುಗಿಸಿ ಮುಂದಿನ ಜೀವನಕ್ಕೆ ಕಾಲಿಡುವ ಸಮಯ’ ಎಂದು ಹೇಳಿದವರು ಸಾಜಲ್ ಮೆಹ್ತಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.