
ಬಸವೇಶ್ವರ ನಗರದ ಶ್ರೀ ಸಪ್ತಕ ಸಂಗೀತ ಅಕಾಡೆಮಿ ಇತ್ತೀಚೆಗೆ `ಸಪ್ತಕ ಸಂಗೀತೋತ್ಸವ~ ಕಾರ್ಯಕ್ರಮ ಆಯೋಜಿಸಿತ್ತು. ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಸಂಗೀತೋತ್ಸವ, ಜಾನಪದ, ಸಮೂಹ ಗಾಯನ ಗೋಷ್ಠಿಗಳು ಮನಸೆಳೆದವು.
ಮೊದಲ ದಿನ ಯಶವಂತ ಹಳಿಬಂಡಿ ಹಾಡಿದ `ಹೋಗು ಮನಸೇ ಹೋಗು~, ಉಪಾಸನಾ ಮೋಹನ್ (ಮುನಿಯ ಬೇಡವೇ ಗೆಳತಿ), ಪಂಚಮ್ ಹಳಿಬಂಡಿ (`ಶಾನುಭೋಗರ ಮಗಳು~), ನಾಗಚಂದ್ರಕಾ ಭಟ್ (`ಪ್ರೀತಿ ಕೊಟ್ಟ ರಾಧೆಗೆ~) ಗೀತೆಗಳ ಜೊತೆಗೆ ಸಪ್ತಕದ ವಿದ್ಯಾರ್ಥಿಗಳ ಸಮೂಹ ಗಾಯನ ದಿನದ ರಂಗನ್ನು ಹಿಮ್ಮಡಿಗೊಳಿಸಿತ್ತು.
ಎರಡನೇ ದಿನ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಗೆ ಕವಿ ದೊಡ್ಡರಂಗೇಗೌಡ `ಶ್ರೀ ಸಪ್ತಕ ವಾರ್ಷಿಕ ಪ್ರಶಸ್ತಿ~ ಪ್ರದಾನ ಮಾಡಿದರು.
ನಂತರ ನಡೆದ ಸಂಗೀತೋತ್ಸವದಲ್ಲಿ ಮೈಸೂರು ಮಹಾದೇವಪ್ಪ, ಬಾನಂದೂರು ಕೆಂಪಯ್ಯ, ಲಕ್ಷ್ಮಣದಾಸ್, ರಮೇಶ್ಚಂದ್ರ, ಕೆ.ಎಸ್.ಸುರೇಖಾ, ಗಾಯತ್ರಿ ಕೇಶವ್ ಸೇರಿದಂತೆ ಇತರೆ ಗಾಯಕರು ಜಾನಪದ, ಭಕ್ತಿ ಗೀತೆಗಳ ಗಾಯನ ಸಂಗೀತಾಸಕ್ತರ ಮನಸೂರೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.