ADVERTISEMENT

‘ದಿಲ್‌ ಸೇ ದಿಲ್‌ ತಕ್’ ಹೃದಯಗಳ ಪಿಸು ಮಾತು!

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:30 IST
Last Updated 28 ಜುಲೈ 2019, 19:30 IST
‘ದಿಲ್‌ ಸೇ ಸಿಲ್‌ ತಕ್‌’ ಸಂವಾದಲ್ಲಿ ಭಾಗವಹಿಸಿದ ಹೃದ್ರೋಗ ತಜ್ಞರಾದ ಡಾ.ಟಿ.ಆರ್. ರಘು, ಡಾ. ಕಿರಣ್‌ ವರ್ಗೀಸ್‌, ಡಾ.ವಿ.ಎಸ್‌. ಪ್ರಕಾಶ್‌, ಡಾ. ಮುರುಳೀಧರ್ ಹಾಗೂ ಡಾ.ಜಿ.ಜಿ.ಶೆಟ್ಟಿ 
‘ದಿಲ್‌ ಸೇ ಸಿಲ್‌ ತಕ್‌’ ಸಂವಾದಲ್ಲಿ ಭಾಗವಹಿಸಿದ ಹೃದ್ರೋಗ ತಜ್ಞರಾದ ಡಾ.ಟಿ.ಆರ್. ರಘು, ಡಾ. ಕಿರಣ್‌ ವರ್ಗೀಸ್‌, ಡಾ.ವಿ.ಎಸ್‌. ಪ್ರಕಾಶ್‌, ಡಾ. ಮುರುಳೀಧರ್ ಹಾಗೂ ಡಾ.ಜಿ.ಜಿ.ಶೆಟ್ಟಿ    

ಹಿಡಿಗಾತ್ರದ ಹೃದಯ ಮನುಷ್ಯನ ಅಸ್ತಿತ್ವ ಮತ್ತು ಜೀವಂತಿಕೆಯ ಸಂಕೇತ. ಪುಟ್ಟ ಅಂಗ ಪ್ರೀತಿ, ಪ್ರೇಮ ಮತ್ತು ಮಾನವೀಯ ಭಾವನೆಯಗಳ ಮೂಲ ಸೆಲೆ. ಹೃದಯದ ಮಿಡಿತ ಸ್ವಲ್ಪ ಲಯ ತಪ್ಪಿದರೂ ಜೀವನ ಕೊನೆಯಾಗುತ್ತದೆ. ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಮತ್ತು ಸುಧಾರಣೆ ಹೃದಯವನ್ನೂ ಜೋಪಾನವಾಗಿಡುತ್ತವೆ. ಬೇರೆಯವರಿಗಾಗಿ ಮಿಡಿಯುವ ನಿಮ್ಮ ಹೃದಯ ತನ್ನ ಆರೋಗ್ಯಕ್ಕೂ ಸ್ವಲ್ಪ ಹೊತ್ತು ಮಿಡಿಯುವಂತಾಗಲಿ...

ಇಂಥದೊಂದು ಸದಾಶಯ ದೊಂದಿಗೆ ನಡೆದ ‘ದಿಲ್‌ ಸೇ ದಿಲ್‌ ತಕ್‌’ (ಹೃದಯದಿಂದ ಹೃದಯದವರೆಗೆ) ಸಂವಾದದಲ್ಲಿ ಅನುರಣಿಸಿದ್ದು ಬರೀ ಹೃದಯದ ಮಾತುಗಳು. ನಗರದ ಬೇರೆ, ಬೇರೆ ಆಸ್ಪತ್ರೆಗಳಐವರು ಹೃದಯ ತಜ್ಞರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ನಾಲ್ಕೈದು ತಾಸುಗಳ ಚರ್ಚೆಯಲ್ಲಿದಶಕಗಳ ಅನುಭವ ಮತ್ತುಮನದಾಳದ ಮಾತು ಹಂಚಿಕೊಂಡರು.ಪುಟ್ಟ ಹೃದಯದ ದೊಡ್ಡ ಜಗತ್ತನ್ನು ತೆರದಿಟ್ಟರು.

ADVERTISEMENT

ರಸ್ತೆ ಅಪಘಾತ, ಆತ್ಮಹತ್ಯೆ ಮತ್ತು ಇತರ ರೀತಿಯ ಸಾವುಗಳಿಗಿಂತ ಹೃದಯಾಘಾತ, ಹೃದಯ ಸ್ತಂಭನದಂತಹ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೇ ಹೆಚ್ಚು.ಭಾರತದಲ್ಲಿ ಪ್ರತಿ 33 ಸೆಕೆಂಡ್‌ಗಳಿಗೊಬ್ಬರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ. ಹೃದಯ ಸಂಬಂಧಿ ಕಾಯಿಲೆಗಳು ವಿಶ್ವದ ನಂಬರ್‌ 1 ಕಿಲ್ಲರ್‌!!!

– ಜಯದೇವ ಆಸ್ಪತ್ರೆಯ ಡಾ. ಟಿ.ಆರ್‌. ರಘು, ಸೇಂಟ್‌ ಆಸ್ಪತ್ರೆಯ ಡಾ. ಕಿರಣ್‌ ವರ್ಗೀಸ್‌, ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ಡಾ. ವಿ.ಎಸ್‌. ಪ್ರಕಾಶ್‌, ಡಾ. ಜಿ.ಜಿ. ಶೆಟ್ಟಿ ಮತ್ತು ಡಾ.ಬಿ.ಜಿ. ಮುರುಳೀಧರ್ ಹೃದಯಕ್ಕೆ ಸಂಬಂಧಿಸಿದ ಕ್ಲೀಷ್ಟಕರ ವಿಷಯಗಳನ್ನು ಹೃದಯಕ್ಕೆ ನಾಟುವಂತೆ ವಿವರಿಸಿದರು.

ಹೃದಯ ಕಾಯಿಲೆಗಳ ಬಗ್ಗೆ ಜನರಲ್ಲಿ ಮುಂಜಾಗ್ರತೆ ಮೂಡಿಸುವ ಉದ್ದೇಶದಸಂವಾದವನ್ನು ಫೇಸ್‌ಬುಕ್‌ ಲೈವ್‌ನಲ್ಲಿ ಹಲವು ಜನರು ವೀಕ್ಷಿಸಿದರು.

ಭಾರತದಲ್ಲಿ ಯುವಜನತೆಯಲ್ಲಿ ಹೃದಯಾಘಾತ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾಗುತ್ತಿವೆ. ಅದರಲ್ಲೂ 18ರಿಂದ 40 ವರ್ಷದೊಳಗಿನ ಯುವಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಭಾರತದಲ್ಲಿ ಹೃದಯಾಘಾತ ಸಂಭವದ ವಯೋಮಿತಿ 40ರಿಂದ 30 ವರ್ಷಕ್ಕೆ ಇಳಿದಿದೆ ಎಂಬ ಆತಂಕ ಎಲ್ಲರ ಮಾತಲ್ಲಿ ಕಂಡುಬಂತು.

ದೈಹಿಕ ಶ್ರಮವಿಲ್ಲದಆಧುನಿಕ ಜೀವನಶೈಲಿ, ಒತ್ತಡದ ಬದುಕು, ಆನುವಂಶಿಕ ಹಿನ್ನೆಲೆ, ವಯಸ್ಸು, ಅನಿಯಂತ್ರಿತ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌, ಬೊಜ್ಜು ಮುಂತಾದವು ಭಾರತೀಯರ ಆರೋಗ್ಯಕ್ಕೆ ಮಾರಕವಾಗಿವೆ. ಪಥ್ಯವಿಲ್ಲದ ಆಹಾರ ಪದ್ಧತಿ, ಕರಿದ ಪದಾರ್ಥ (ಜಂಕ್‌ ಫುಡ್) ಮತ್ತು ಪಾಸ್ಟ್‌ಫುಡ್‌ ಸೇವನೆ, ವಾಯು ಮಾಲಿನ್ಯ ಮುಂತಾದವು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ ಎಂಬ ಆತಂಕಕಾರಿ ಅಂಶಗಳನ್ನು ಬಿಡಿಸಿಟ್ಟರು.

ಉತ್ತಮ ಜೀವನ ಶೈಲಿ, ಆಹಾರ ಪದ್ಧತಿ, ಪ್ರತಿನಿತ್ಯ ವಾಕಿಂಗ್‌ ಮತ್ತು ವ್ಯಾಯಾಮದಿಂದ ಹೃದಯ ಕಾಯಿಲೆ ತಡೆಗಟ್ಟಬಹುದು ಎನ್ನುವುದು ಈ ಸಂವಾದದ ಆಶಯವಾಗಿತ್ತು.

-ಸಂಗೀತಾ ಗೊಂಧಳೆ /ಐಶ್ಚರ್ಯಾ ಚಿಮ್ಮಲಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.