ADVERTISEMENT

ಒರಾಯನ್ ಮಾಲ್‌ನಲ್ಲಿ ‘ಫಾರೆವರ್ 21’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:45 IST
Last Updated 16 ಡಿಸೆಂಬರ್ 2019, 19:45 IST
ಕರೀನಾ ಕಪೂರ್‌
ಕರೀನಾ ಕಪೂರ್‌   

ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ರಿಟೇಲ್‌ ಲಿಮಿಟೆಡ್ ಭಾಗವಾಗಿರುವ ಕ್ಯಾಲಿಫೋರ್ನಿಯಾದ ಲಾಸ್‌ಏಂಜಲೀಸ್ ಮೂಲದ ‘ಫಾರೆವರ್ 21’ ಜನಮನ್ನಣೆಯ ಫ್ಯಾಶನ್ ತಾಣ ಎನಿಸಿದೆ. ಬಾಲಿವುಡ್ ಸ್ಟೈಲ್‌ ಐಕಾನ್ ಕರೀನಾ ಕಪೂರ್‌ ಖಾನ್, ಈಚೆಗೆ ಒರಾಯನ್ ಮಾಲ್‌ನಲ್ಲಿ ಫಾರೆವರ್ 21 ಮಳಿಗೆಯನ್ನು ಉದ್ಘಾಟಿಸಿದರು.

ಈ ‘ಫಾರೆವರ್ 21’ ಮಳಿಗೆ ನವನವೀನ ಟ್ರೆಂಡ್‌ ಕಲೆಕ್ಷನ್‌ ಹೊಂದಿದೆ. ಪಾರ್ಟಿ ಮೋಡ್‌ಗೆ ಎಬೋಟ್ ಲಾಸ್ಟ್‌ ನೈಟ್ ಸಂಗ್ರಹದಿಂದ ರೇಷ್ಮೆಯಂತೆ ಒತ್ತೊತ್ತಾಗಿ ಹಣೆದ ಸ್ಯಾಟಿನ್, ಪೆಟ್ರೋಲ್‌ ವರ್ಣದ ಸೀಕ್ವೆನ್‌ಗಳು, ಮೆಟಾಲಿಕ್ ಲೆದರ್‌ ಹಾಗೂ ಆಕರ್ಷಕ ಫಿಟ್‌ ಆಗಿರುವ ಬ್ಲೇಜರ್‌ಗಳನ್ನು ಇಲ್ಲಿ ಆಯ್ಕೆ ಮಾಡಬಹುದು.

ಚಳಿಗಾಲಕ್ಕೆ ‘ದಿ ಐಸ್ ಐಸ್ ಬೇಬಿ’ ಸಂಗ್ರಹದಲ್ಲಿ ಬಾಂಬರ್ ಜಾಕೆಟ್‌ಗಳು, ಕ್ರಾಪ್ ಸ್ವೆಟರ್‌ಗಳಿವೆ. ನವನವೀನ ಲುಕ್‌ಗಾಗಿ ಚೆರ‍್ರಿ ಬಾಂಬ್‌ ಸಂಗ್ರಹದಿಂದ ಸ್ಪಾರ್ಕಲ್‌ ಟೆಕ್ಸ್ಟರ್‌ ಹೆಣೆದ ಸ್ವೆಟರ್‌ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು. ಅರ್ಬನ್ ಯೂಥ್ ಸಂಗ್ರಹದ ಫಿಟ್‌ ಡ್ರೆಸ್‌, ಓಪನ್ ನಿಟ್ ಸ್ವೆಟರ್‌, ಜಾಕೆಟ್‌, ಗ್ರಾಫಿಕ್ ಸ್ವೆಟ್ ಶರ್ಟ್‌, ಸ್ವೆಟರ್‌ ಇಲ್ಲಿ ಲಭ್ಯ.

ADVERTISEMENT

ಈ ಮಳಿಗೆಯಲ್ಲಿ ಮೊದಲ 100 ಗ್ರಾಹಕರು, ₹2100 ಮೌಲ್ಯದ ಶಾಪಿಂಗ್‌ ಅನ್ನು ಉಚಿತವಾಗಿ ಮಾಡುವ ಅವಕಾಶ ಪಡೆಯಲಿದ್ದಾರೆ. ನಂತರದ 100 ಗ್ರಾಹಕರು ₹1100 ಮೌಲ್ಯದ ಉಚಿತ ಶಾಪಿಂಗ್‌ ಮಾಡುವ ಅವಕಾಶ ಪಡೆಯಲಿದ್ದಾರೆ.

ಡಿ.31ರ ಒಳಗೆ ₹2,500 ಶಾಪಿಂಗ್‌ ಮೇಲೆ ರಿಯಾಯಿತಿ ಪಡೆಯಬಹುದು, ₹5,000 ಶಾಪಿಂಗ್ ಮಾಡಿದರೆ, ₹2,500 ಮೊತ್ತ ರಿಡೀಮ್ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.