ADVERTISEMENT

ರಾಷ್ಟ್ರಧ್ವಜ ಬಳಕೆಗಾಗಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:00 IST
Last Updated 12 ಆಗಸ್ಟ್ 2019, 20:00 IST
ರಾಮಮೂರ್ತಿ ನಗರದ ಎನ್ಆರ್‌ಐ ಬಡಾವಣೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮ
ರಾಮಮೂರ್ತಿ ನಗರದ ಎನ್ಆರ್‌ಐ ಬಡಾವಣೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮ   

ರಾಮಮೂರ್ತಿನಗರದ ಎನ್‌.ಆರ್‌.ಐ ಬಡಾವಣೆಯ ಪುಣ್ಯಭೂಮಿ ಸೇವಾ ಫೌಂಡೇಶನ್‌ ಮತ್ತು ಹುಬ್ಬಳ್ಳಿಯ ಹ್ಯಾಪಿ ಹೋಂ ಫೌಂಡೇಶನ್‌ ಸದಸ್ಯರುಶಾಲೆ, ಅಪಾರ್ಟ್‌ಮೆಂಟ್‌, ಸಂಘ, ಸಂಸ್ಥೆಗಳಿಗೆ ತೆರಳಿ ರಾಷ್ಟ್ರಧ್ವಜ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಾಗುವ ರಾಷ್ಟ್ರಧ್ವಜದ ಬಳಕೆ ಹೆಚ್ಚಬೇಕು. ಇದರಿಂದ ಹತ್ತಿ ಬೆಳೆಯುವ ರೈತರು, ಧ್ವಜ ತಯಾರಿಸುವ ಸಹಸ್ರಾರು ಮಹಿಳೆಯರಿಗೆ ಅನುಕೂಲವಾಗಲಿದೆ. ಈ ಉದ್ದೇಶದಿಂದ ಪುಣ್ಯಭೂಮಿ ಸಂಸ್ಥೆ ಖಾದಿ ಧ್ವಜಗಳನ್ನು ಖಾದಿ ಗ್ರಾಮೋದ್ಯೋಗ ಹುಬ್ಬಳ್ಳಿಯಿಂದ ಖರೀದಿಸಿದೆ.ಮಾರಾಟದ ಹಣವನ್ನು ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ವಿನಿಯೋಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT