ADVERTISEMENT

ಸಾರ್ಥಕ ಸ್ವಾಭಿಮಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:45 IST
Last Updated 23 ಜನವರಿ 2019, 19:45 IST
   

ಹೆಸರು ದೀಕ್ಷಾ ಜೆ.ಎನ್‌. ಬಿಇಎಲ್‌ ಕಾಲೇಜ್‌ಬಿ.ಕಾಂ ಮೊದಲ ವರ್ಷದ ವಿದ್ಯಾರ್ಥಿನಿ. ಓದಲೆಂದೇ ದೊಡ್ಡಬಳ್ಳಾಪುರದಿಂದ ಇಲ್ಲಿಗೆ ತಾಯಿ ಮತ್ತು ಇಬ್ಬರು ಸಹೋದರಿಯರೊಂದಿಗೆ ನಗರಕ್ಕೆ ಬಂದವಳು.ಅಪ್ಪ ಊರಲ್ಲೇ. ತಾಯಿ ಮತ್ತು ತನ್ನಂತೆ ಓದುತ್ತಿರುವ ಇಬ್ಬರು ಸಹೋದರಿಯರೊಂದಿಗೆ ನಗರದಲ್ಲಿ ವಾಸವಿದ್ದಾಳೆ. ಓದುವ ವಯಸ್ಸಲ್ಲಿ ಇದ್ಯಾಕೆ ಅಂದರೆ, ‘ನನ್ನ ಓದಿನ ಖರ್ಚು ಮತ್ತು ಮನೆ ನಡೀಬೇಕಲ್ಲ’ಎನ್ನುತ್ತಾಳೆ.

ಬೆಳಿಗ್ಗೆಯಿಂದ ಸಂಜೆವರೆಗೂ ಕಾಲೇಜ್‌. ಸಂಜೆಯಿಂದ ರಾತ್ರಿ ಹತ್ತು ಗಂಟೆವರೆಗೆ ಇಲ್ಲಿ ನಿಂತು ಆಲೂ ಚಿಪ್ಸ್‌, ಬರ್ಗರ್‌ ಮಾಡ್ತಿನಿ. ಸಂಜೆ ಸ್ನ್ಯಾಕ್ಸ್‌ಗೆ ಅಂತ ಜನ ಬರ್ತಾರೆ. ಪರವಾಗಿಲ್ಲ ನಾಲ್ಕು ಕಾಸು ಸಿಗುತ್ತೆ. ನನಗಷ್ಟು ಸಾಕು ಓದಿನ ಖರ್ಚಿಗೆ ಮನೆಗೆ ಸ್ವಲ್ಪ ಸಹಾಯಕ್ಕೆ. ಹೇಗೆ ನಿಂಗೆ ಈ ಐಡಿಯಾ ಬಂತು? ಆಲೂ ಚಿಪ್ಸ್, ಬರ್ಗರ್‌ ಮಾಡೋದನ್ನ ನೋಡಿದ್ದೆ.

ಮಾಡುವ ವಿಧಾನ ತುಂಬ ಸರಳ ಅನಿಸಿತು. ಮಾಡೋದನ್ನ ಕಲಿತೆ. ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಇಂಥದೊಂದು ವ್ಯವಸ್ಥೆ ಮಾಡಿಕೊಂಡೆ. ಈಗ ಬಿಸಿ ಬಿಸಿ ಚಿಪ್ಸ್‌, ಬರ್ಗರ್‌ ಮಾಡ್ತಿದಿನಿ. ನೋಡಿ ಹೇಗಿದೆ ಟೇಸ್ಟ್‌ ಎಂದು ಕೈಗಿತ್ತಾಗ ಯುವತಿಯ ಸ್ವಾಭಿಮಾನಕ್ಕೆ ನನ್ನೊಳಗೊಂದು ಸಲಾಂ ಬಯಕೆ. ಅವಳ ಮುಖದಲ್ಲಿ ಪುಟ್ಟ ಸ್ಮೈಲ್‌, ಆತ್ಮವಿಶ್ವಾಸ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.