ADVERTISEMENT

ಮನರಂಜಿಸಿದ ಪಾಪ್ ಕಲ್ಚರ್ ವೇಷಧಾರಿಗಳು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:30 IST
Last Updated 10 ನವೆಂಬರ್ 2019, 19:30 IST
ಕಾಮಿಕ್ ಕಾನ್‌ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಪಾಪ್ ಕಲ್ಚರ್ ಪಾತ್ರಗಳ ವೇಶ ತೊಟ್ಟು ಸಂಭ್ರಮಿಸಿದ ಪಾತ್ರಧಾರಿಗಳು
ಕಾಮಿಕ್ ಕಾನ್‌ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಪಾಪ್ ಕಲ್ಚರ್ ಪಾತ್ರಗಳ ವೇಶ ತೊಟ್ಟು ಸಂಭ್ರಮಿಸಿದ ಪಾತ್ರಧಾರಿಗಳು   

ಕಾಮಿಕ್ ಕಾನ್ ಇಂಡಿಯಾ ಕಾರ್ಯಕ್ರಮ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗ ಇಂದಿರಾನಗರದಲ್ಲಿ ಯುವಕ ಮತ್ತು ಯುವತಿಯರು ತಮಗಿಷ್ಟದ ಪಾಪ್ ಕಲ್ಚರ್ ಪಾತ್ರಗಳ ವೇಷ ತೊಟ್ಟು ಸಂಭ್ರಮಿಸಿದರು.

ಸ್ಪೈಡರ್ ಮ್ಯಾನ್, ಬ್ಲಾಕ್ ವಿಡೋ, ಐರನ್ ಮ್ಯಾನ್, ಬ್ಯಾಟ್‌ಮ್ಯಾನ್‌, ವಂಡರ್ ವುಮನ್ ಸೇರಿದಂತೆ ವಿವಿಧ ಪಾಪ್ ಕಲ್ಚರ್ ಪಾತ್ರಗಳ ವೇಷಧಾರಿಗಳು ಗಮನ ಸೆಳೆದರು. ಕಾಮಿನ್ ಕಾನ್ ಇಂಡಿಯಾ ಮತ್ತು ವಪೌರ್ ಜಂಟಿಯಾಗಿ ಈ ಪಾತ್ರಧಾರಿಗಳಿಗೆ ‘ಸೂಪರ್ ಹಿರೋ ಪಾರ್ಟಿ’ ಆಯೋಜಿಸಿತ್ತು. ಪಾರ್ಟಿಯಲ್ಲಿ ವೇಷಧಾರಿಗಳು ವಿವಿಧ ಮೋಜಿನ ಆಟ, ಸೆಲ್ಫಿ, ಉಡುಗೊರೆ ನೀಡಿ ಸಂಭ್ರಮಿಸಿರು.

‘ಪಾಪ್ ಕಲ್ಚರ್ ಪಾತ್ರಗಳ ವೇಷಧಾರಣೆ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಸಾಕಷ್ಟು ಯುವ ಜನತೆ ಪಾಪ್ ಪಾತ್ರಗಳ ವೇಷಧಾರಣೆಗೆ ಮುಂದಾಗುತ್ತಿದ್ದಾರೆ’ ಎಂದು ಕಾಮಿನ್ ಕಾನ್ ಇಂಡಿಯಾದ ಸಂಸ್ಥಾಪಕ ಜಟಿನ್ ವರ್ಮ ಹೇಳುತ್ತಾರೆ.

ADVERTISEMENT

ನ.16 ಮತ್ತು 17 ರಂದು ನಡೆಯಲಿರುವ ಕಾಮಿಕ್ ಕಾನ್ ಇಂಡಿಯಾ ಕಾರ್ಯಕ್ರಮದ ಪೂರ್ವಭಾರಿಯಾಗಿ ವೇಷಧಾರಿಗಳಲ್ಲಿ ಉತ್ಸಾಹ ತುಂಬಲು ಈ ಪಾರ್ಟಿ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.