ADVERTISEMENT

ಬೆಂಗಳೂರಿನಲ್ಲಿ ಟ್ವಿನ್‌ ಟವರ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:46 IST
Last Updated 2 ಏಪ್ರಿಲ್ 2019, 19:46 IST
   

ಪೆಟ್ರಾನಾಸ್‌ ಟ್ವಿನ್‌ ಟವರ್‌ನ ಆಕರ್ಷಣೆಯಿಂದಲೇ ಎಷ್ಟೋ ಜನರು ಮಲೇಷ್ಯಾಕ್ಕೆ ಪ್ರಯಾಣ ಮಾಡುತ್ತಾರೆ. ಅದೇ ಟವರ್ ಬೆಂಗಳೂರಿನಲ್ಲಿ ನೋಡಲು ಸಿಕ್ಕರೆ!

ಈ ರೀತಿ ಯೋಚಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿ ಪೀಟರ್‌ ನಗರದಲ್ಲಿಯೇ ಟ್ವಿನ್‌ ಟವರ್‌ನ ಪ್ರತಿಕೃತಿ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಬೇಸಿಗೆ ರಜೆಯನ್ನು ಬೆಂಗಳೂರಿನಲ್ಲೇ ಕಳೆಯುವ ಮಕ್ಕಳು ಈಗ ಟ್ವಿನ್‌ ಟವರ್‌ ನೋಡಲು ಮುಗಿಬಿದ್ದಿದ್ದಾರೆ.

ಬಿನ್ನಿಮಿಲ್‌ ಕ್ರೀಡಾಂಗಣದಲ್ಲಿ ನ್ಯಾಷನಲ್‌ ಕನ್ಸೂಮರ್ ಫೇರ್ ನಡೆಯುತ್ತಿದೆ. ಅಲ್ಲಿಯೇ ಟ್ವಿನ್‌ ಟವರ್ ನೋಡಲು ಸಿಗಲಿದೆ.

ADVERTISEMENT

ಒಂದು ತಿಂಗಳ ಕಾಲ 40 ಮಂದಿ ಹಗಲು, ರಾತ್ರಿ ಇದಕ್ಕಾಗಿ ಕೆಲಸ ಮಾಡಿದ್ದಾರೆ. 90 ಅಡಿ ಎತ್ತರ ಹಾಗೂ 40 ಅಡಿ ಸುತ್ತಳತೆಯನ್ನು ಇವು ಹೊಂದಿವೆ. 50 ಟನ್‌ ಉಕ್ಕು ಬಳಸಿ ಅತ್ಯಂತ ನಾಜೂಕಾಗಿ ಬೀಳದಂತೆ ಕಟ್ಟಲಾಗಿದೆ.

ಟ್ವಿನ್‌ ಟವರ್‌ನ ಇನ್ನೊಂದು ವಿಶೇಷ ಎಂದರೆ, ರಾತ್ರಿ ಹೊತ್ತು ಮಿನುಗುವ ಮೂಲಕ ನೋಡುಗರ ಆಕರ್ಷಣೆ ಹೆಚ್ಚಿಸಲಿದೆ.

1998–2004ರ ಅವಧಿಯಲ್ಲಿಪೆಟ್ರಾನಾಸ್‌ ಜಗತ್ತಿನ ಎತ್ತರದ ಗೋಪುರಗಳು ಎಂಬ ಖ್ಯಾತಿ ಪಡೆದಿತ್ತು. ವಿನ್ಯಾಸ ತಾಂತ್ರಿಕತೆಯಲ್ಲಿ ಡಿಪ್ಲೊಮಾ ಪಡೆದಿರುವ ಪೀಟರ್‌, ಮಲೇಷ್ಯಾಕ್ಕೆ ಭೇಟಿ ನೀಡಿ ಟ್ವಿನ್‌ ಟವರ್‌ನ ನಿರ್ಮಾಣ ಹಾಗೂ ವಿನ್ಯಾಸದ ಮಾಹಿತಿ ಪಡೆದುಕೊಂಡಿದ್ದರು.

ಅದೇ ರೀತಿ ಕಾಣುವಂತೆ ಶ್ರಮವಹಿಸಿ ನಿರ್ಮಿಸಿದ್ದಾರೆ. ಈ ಮೇಳದಲ್ಲಿ ಟ್ವಿನ್‌ ಟವರ್‌ ಪ್ರಮುಖ ಆಕರ್ಷಣೆ. ಅದರ ಜೊತೆ 150ಕ್ಕೂ ಅಧಿಕ ಅಂಗಡಿ ಮಳಿಗೆಗಳು ಇಲ್ಲಿವೆ. 5 ಸಾವಿರಕ್ಕೂ ಅಧಿಕ ಉತ್ಪನ್ನಗಳು ಸಿಗಲಿವೆ. ರೋಬೋಟಿಕ್ ಎನಿಮಲ್‌, ಸೆಲ್ಫಿ ಗ್ಯಾಲರಿ ಕೂಡ. ಮಾರ್ಚ್‌ 29ರಿಂದ ಮೇಳ ಆರಂಭವಾಗಿದೆ. ಜೂನ್‌ 9ರವರೆಗೆ ಪ್ರತಿದಿನ ಸಂಜೆ 4ರಿಂದ 9ರವರೆಗೆ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.