
ಹೋಟೆಲ್ ಒಂದರಲ್ಲಿ ಕೋತಿಯೊಂದು ಹಬೆಯಾಡುತ್ತಿರುವ ಇಡ್ಲಿಯನ್ನು ಗ್ರಾಹಕರಿಗೆ ನೀಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಕ್ಷಿಣ ಭಾರತದ ರೆಸ್ಟೋರೆಂಟ್ ಒಂದರಲ್ಲಿ ಈ ವಿಶೇಷ ಸರ್ವರ್ ಕೋತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ಮಲ್ಟಿವರ್ಸ್‌ಮ್ಯಾಟ್ರಿಕ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದೇ 19ರಂದು ಪೋಸ್ಟ್ ಮಾಡಲಾದ ವಿಡಿಯೊ ಸಿಕ್ಕಿತು. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಳ್ಳುತ್ತಿರುವ ವಿಡಿಯೊವೇ ಆಗಿತ್ತು. ಆ ಪೋಸ್ಟ್ ಅನ್ನು ಕೂಲಂಕಷ ಪರಿಶೀಲನೆಗೆ ಒಳಪಡಿಸಿದಾಗ, ಅದು ಎಐ ತಂತ್ರಜ್ಞಾನದಲ್ಲಿ ನಿರ್ಮಿಸಿರುವ ವಿಡಿಯೊ ಎಂಬುದು ಗೊತ್ತಾಯಿತು. ಇನ್‌ಸ್ಟಾಗ್ರಾಂ ಬಳಕೆದಾರ ಕೂಡ, ಇದನ್ನು ಸಂಪೂರ್ಣವಾಗಿ ಹಿಗ್ಸ್‌ಫೀಲ್ಡ್ ಎಂಬ ಎಐ ಆಧಾರಿತ ವಿಡಿಯೊ ಸೃಷ್ಟಿಸುವ ಟೂಲ್ ಬಳಸಿಕೊಂಡು ರೂಪಿಸಲಾಗಿದೆ ಎಂದು ಉಲ್ಲೇಖಿಸಿದ್ದರು. ಇದನ್ನು ದೃಢಪಡಿಸುವುದಕ್ಕಾಗಿ ವಿಡಿಯೊವನ್ನು ಎಐ ಪತ್ತೆ ಹಚ್ಚುವ ಝೂಕ್ ಎಐ ಡಿಟೆಕ್ಟರ್ ಟೂಲ್ ಮೂಲಕ ಪರಿಶೀಲಿಸಿದಾಗ ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.