‘ಕೇರಳದ ಪಾಲಕ್ಕಾಡ್‌ನಲ್ಲಿ ಬರ್ಬರವಾಗಿ ಆನೆ ಹತ್ಯೆಗೆ ಕಾರಣರಾದ ಅಮ್ಜದ್ ಅಲಿ ಮತ್ತು ತಮೀಮ್ ಶೇಖ್ ಎಂಬ ಇಬ್ಬರು ಮುಸ್ಲಿಮರನ್ನು ಬಂಧಿಸಲಾಗಿದೆ’ – ಹೀಗೆಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರ ಮಾಧ್ಯಮ ಸಲಹೆಗಾರ ಅಮರ್ ಪ್ರಸಾದ್ ರೆಡ್ಡಿ ಅವರು ಮೊದಲಿಗೆ ಟ್ವೀಟ್ ಮಾಡಿದ್ದರು. ಅವರು ಸ್ಪಷ್ಟನೆ ನೀಡುವ ಹೊತ್ತಿಗೆ ಅದು ಸಾವಿರಾರು ಬಾರಿ ಲೈಕ್ ಹಾಗೂ ರೀಟ್ವೀಟ್ ಆಗಿತ್ತು. ಕೆಲವು ಮಾಧ್ಯಮಗಳು ಪ್ರಸಾದ್ ಅವರ ಟ್ವೀಟ್ ಆಧರಿಸಿ ಸುದ್ದಿ ಪ್ರಸಾರ ಮಾಡಿದವು. ಬಂಧಿತರು ಮದರಸಾ ಕೊಡುಗೆ ಎಂದು ಕೆಲವರು ಬಿಂಬಿಸಿದರು.
ಈ ಬಗ್ಗೆ ಪಾಲಕ್ಕಾಡ್ ಎಸ್‌ಪಿ ಜಿ. ಶಿವ ವಿಕ್ರಮ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಪ್ರಕರಣ ಸಂಬಂಧ ಪಿ. ವಿಲ್ಸನ್ ಎಂಬಾತನನ್ನು ಬಂಧಿಸಲಾಗಿದೆ’ ಎಂದಿದ್ದಾರೆ. ವಿಲ್ಸನ್ ಬಂಧನ ವಿಷಯವನ್ನು ಡಿಡಿ ನ್ಯೂಸ್ ಮಲಯಾಳಂ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.