ADVERTISEMENT

Fact Check: ಭಾರತದಲ್ಲಿ ಕೋವಿಡ್ ಲಸಿಕೆ ಅಗ್ಗವೇ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:31 IST
Last Updated 15 ಮಾರ್ಚ್ 2021, 19:31 IST
  ಭಾರತದಲ್ಲಿ ಲಸಿಕೆ ಅಗ್ಗ ಎಂಬ ಉಲ್ಲೇಖವಿರುವ ಸಂದೇಶ
ಭಾರತದಲ್ಲಿ ಲಸಿಕೆ ಅಗ್ಗ ಎಂಬ ಉಲ್ಲೇಖವಿರುವ ಸಂದೇಶ   

ಕೋವಿಡ್ ಬಾಧಿಸುತ್ತಿರುವ ಜಗತ್ತಿನ ಬಹುತೇಕ ದೇಶಗಳು ಲಸಿಕೆಯ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿವೆ. ಭಾರತವೂ ಸೇರಿದಂತೆ ಕೆಲವೇ ದೇಶಗಳು ಕೋವಿಡ್ ಲಸಿಕೆಯನ್ನು ಈಗಾಗಲೇ ಜನರಿಗೆ ನೀಡಲು ಆರಂಭಿಸಿವೆ. ಲಸಿಕೆಯ ದರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಜಗತ್ತಿನಲ್ಲಿ ಭಾರತವೇ ಅತಿಕಡಿಮೆ ಬೆಲೆಗೆ ಲಸಿಕೆ ನೀಡುತ್ತಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೇ ಆಧರಿಸಿ ಬಿಜೆಪಿ ಘಟಕವು ಟ್ವೀಟ್ ಮಾಡಿದೆ.

ವಿವಿಧ ದೇಶಗಳಲ್ಲಿರುವ ಲಸಿಕೆ ದರ ಕುರಿತು ಆಲ್ಟ್ ನ್ಯೂಸ್ ಪರಾಮರ್ಶೆ ನಡೆಸಿದೆ. ಯುನಿಸೆಫ್‌ ವರದಿ ಆಧರಿಸಿ ಮಾಧ್ಯಮಸಂಸ್ಥೆಯು ತಪ್ಪಾಗಿ ವರದಿ ಮಾಡಿದೆ ಎಂದು ವೆಬ್‌ಸೈಟ್ ತಿಳಿಸಿದೆ. ಯುನಿಸೆಫ್‌ ವರದಿಯಲ್ಲಿರುವುದು ಆಯಾ ದೇಶಗಳು ಪ್ರತಿ ಡೋಸ್ ಲಸಿಕೆ ತಯಾರಿಸಲು ಮಾಡಿದ ವೆಚ್ಚವೇ ಹೊರತು ಮಾರಾಟ ದರವಲ್ಲ. ವರದಿಯಲ್ಲಿ ಭಾರತದ ಲಸಿಕೆಯ ಪ್ರತ್ಯೇಕ ವಿಭಾಗವಿದ್ದು, ಇದರಲ್ಲಿ ಸರ್ಕಾರ ಖರೀದಿ ಮಾಡುವ ವೆಚ್ಚ ಹಾಗೂ ಖಾಸಗಿ ಮಾರಾಟದ ವಿವರವಿದೆ. ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಉಚಿತ ನೀಡುವ ವಾಗ್ದಾನವನ್ನು ಸರ್ಕಾರ ನೀಡಿದೆ. ರಷ್ಯಾ, ಅಮೆರಿಕ, ಐರೋಪ್ಯ ಒಕ್ಕೂಟ, ಚೀನಾ ಮೊದಲಾದ ದೇಶಗಳ ವೆಬ್‌ಸೈಟ್ ಪರಿಶೀಲಿಸಿದಾಗ, ಎಲ್ಲ ಕಡೆಯೂ ಲಸಿಕೆ ಉಚಿತ ಎಂಬ ಮಾಹಿತಿ ಇದೆಯೇ ಹೊರತು ಮಾರಾಟ ದರದ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT