ADVERTISEMENT

ಫ್ಯಾಕ್ಟ್ ಚೆಕ್ | ಮುಸ್ಕಾನ್ ಘೋಷಣೆ ಕೂಗಿದ್ದರ ಹಿಂದೆ ಸಂಚು ನಡೆದಿದೆಯೇ?

ಪ್ರಜಾವಾಣಿ ವಿಶೇಷ
Published 14 ಫೆಬ್ರುವರಿ 2022, 20:30 IST
Last Updated 14 ಫೆಬ್ರುವರಿ 2022, 20:30 IST
   

ಸುಳ್ಳು:

ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಯುವಕರು ಕೇಸರಿ ಶಾಲು ತೊಟ್ಟು, ಜೈ ಶ್ರೀರಾಂ ಎಂದು ಘೋಷಣೆ ಕೂಗುತ್ತಿದ್ದಾಗ, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಬುರ್ಖಾಧಾರಿ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಅವರದ್ದೆಂದು ಹೇಳಲಾಗುತ್ತಿರುವ ವಿಡಿಯೊ ಒಂದುಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಮುಸ್ಲಿಮರ ಪರವಾಗಿ ಘೋಷಣೆ ಕೂಗಿದ ಮುಸ್ಕಾನ್ ಅವರ ಚಿತ್ರವನ್ನು ದುಬೈನ ಬುರ್ಜ್ ಖಲೀಫಾದ ಮೇಲೆ ಪ್ರದರ್ಶಿಸಲಾಗಿದೆ. ಆ ಯುವತಿ ಘೋಷಣೆ ಕೂಗಿದ್ದರ ಹಿಂದೆ ಯಾರದೆಲ್ಲಾ ಕೈವಾಡ ಇದೆ, ಸಂಚು ಇದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ’ ಎಂದು ಆರೋಪಿಸಲಾಗಿದೆ.

ಸತ್ಯ:
ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ವೈರಲ್ ಆಗಿರುವ ವಿಡಿಯೊವನ್ನು ತಿರುಚಿ, ಸೃಷ್ಟಿಸಲಾಗಿದೆ. ಫೆ.4ರಂದು ಚೀನಾ ಹೊಸವರ್ಷಕ್ಕೆ ಶುಭಾಶಯ ಕೋರಿ ಬುರ್ಜ್ ಖಲೀಫಾ ಕಟ್ಟಡ ಮಂಡಳಿಯು ಟ್ವೀಟ್ ಮಾಡಿತ್ತು. ಅದೇ ವಿಡಿಯೊಗೆ ಮುಸ್ಕಾನ್ ಅವರ ಚಿತ್ರ ಮತ್ತು ಹೆಸರನ್ನು ಸೇರಿಸಿ, ಈ ವಿಡಿಯೊ ಸೃಷ್ಟಿಸಲಾಗಿದೆ. ಈ ಮೂಲಕ ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ. ಮುಸ್ಕಾನ್ ಅವರ ಘೋಷಣೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಸುಳ್ಳು ಅಭಿಪ್ರಾಯ ಮೂಡಿಸಲು ಯತ್ನಿಸಲಾಗಿದೆ’ ಎಂದು ಆಲ್ಟ್‌ ನ್ಯೂಸ್ ವಿವರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.