ADVERTISEMENT

ಫ್ಯಾಕ್ಟ್ ಚೆಕ್: ಪೊಲೀಸರಾ ಇವರು?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 18:36 IST
Last Updated 4 ಫೆಬ್ರುವರಿ 2021, 18:36 IST
ಜೀನ್ಸ್ ಪ್ಯಾಂಟ್‌ ಧರಿಸಿರುವ ಇವರು ಯಾವ ರಾಜ್ಯದ ಪೊಲೀಸ್ ಸಿಬ್ಬಂದಿ ಎಂದು ಚರ್ಚೆಯಾಗುತ್ತಿದೆ
ಜೀನ್ಸ್ ಪ್ಯಾಂಟ್‌ ಧರಿಸಿರುವ ಇವರು ಯಾವ ರಾಜ್ಯದ ಪೊಲೀಸ್ ಸಿಬ್ಬಂದಿ ಎಂದು ಚರ್ಚೆಯಾಗುತ್ತಿದೆ   

ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಜಾಗದಲ್ಲಿ ಕೆಲವು ಜನರು ಪೊಲೀಸರು ಧರಿಸುವ ರಕ್ಷಣಾ ಉಪಕರಣಗಳನ್ನು ಧರಿಸಿ, ಬಂದೋಬಸ್ತ್ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರದ ಮುಂಭಾಗದಲ್ಲಿರುವ ವ್ಯಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದು, ಸಿಂಘು ಗಡಿಯಲ್ಲಿ ರೈತರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ‘ಜೀನ್ಸ್ ಪ್ಯಾಂಟ್ ಧರಿಸಿ ಹೊಸ ಸಮವಸ್ತ್ರದಲ್ಲಿ ಕಾಣಿಸುತ್ತಿರುವ ಇವರು ಯಾವ ರಾಜ್ಯದ ಪೊಲೀಸರು’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.