ADVERTISEMENT

ಫ್ಯಾಕ್ಟ್ ಚೆಕ್: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೈಲ ಬೆಲೆ ಕಡಿಮೆ?

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 19:30 IST
Last Updated 2 ಮಾರ್ಚ್ 2021, 19:30 IST
ಬಿಜೆಪಿ ಆಡಳಿತ ಇರುವ ಹಾಗೂ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ತೈಲ ಬೆಲೆ ಎಷ್ಟಿದೆ ಎಂದು ಸೂಚಿಸುವ ಪಟ್ಟಿಯನ್ನು ತಮಿಳುನಾಡು ಬಿಜೆಪಿ ವಕ್ತಾರ ಸೂರ್ಯ ಟ್ವೀಟ್ ಮಾಡಿದ್ದಾರೆ
ಬಿಜೆಪಿ ಆಡಳಿತ ಇರುವ ಹಾಗೂ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ತೈಲ ಬೆಲೆ ಎಷ್ಟಿದೆ ಎಂದು ಸೂಚಿಸುವ ಪಟ್ಟಿಯನ್ನು ತಮಿಳುನಾಡು ಬಿಜೆಪಿ ವಕ್ತಾರ ಸೂರ್ಯ ಟ್ವೀಟ್ ಮಾಡಿದ್ದಾರೆ   

ತೈಲ ಬೆಲೆ ಏರಿಕೆ ಬಗ್ಗೆ ದೇಶದಲ್ಲಿ ಈಗ ಭಾರಿ ಚರ್ಚೆಗಳು ನಡೆಯುತ್ತಿವೆ. ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಮುಗಿಬಿದ್ದಿವೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದರ ಕಡಿಮೆಯಿದ್ದು, ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ದರ ಅಧಿಕವಾಗಿದೆ ಎಂಬುದಾಗಿ ತಮಿಳುನಾಡು ಬಿಜೆಪಿ ಘಟಕದ ವಕ್ತಾರ ಎಸ್‌.ಜಿ. ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ.

ಸೂರ್ಯ ಅವರು ಮಾಡಿರುವ ಟ್ವೀಟ್‌ನಲ್ಲಿರುವ ಅಂಶಗಳನ್ನು ಆಲ್ಟ್ ನ್ಯೂಸ್ ಪರಾಮರ್ಶೆ ನಡೆಸಿದೆ. ಟ್ವೀಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತೋರಿಸುವ ಪಟ್ಟಿಯಲ್ಲಿ ಆಯ್ದ ರಾಜ್ಯಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಅತಿಹೆಚ್ಚು ದರ ಇರುವ ಬಿಜೆಪಿ ಆಡಳಿತದ ಕರ್ನಾಟಕ ಹಾಗೂ ಮಧ್ಯಪ್ರದೇಶಗಳನ್ನು ಪಟ್ಟಿಯಲ್ಲಿ ತೋರಿಸಿಲ್ಲ. ಹಾಗೆಯೇ ಬಿಜೆಪಿಯೇತರ ಆಡಳಿತ ಇರುವ ಆಂಧ್ರ ಪ್ರದೇಶ, ಪಂಜಾಬ್‌ಗಳಲ್ಲಿ ದರ ಹೆಚ್ಚಿದ್ದರೂ ಆ ರಾಜ್ಯಗಳ ಹೆಸರು ನಮೂದಿಸಿಲ್ಲ. ಹೀಗಾಗಿ ಇದು ದಾರಿ ತಪ್ಪಿಸುವ ಟ್ವೀಟ್ ಎಂದು ಆಲ್ಟ್‌ನ್ಯೂಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT