ಫ್ಯಾಕ್ಟ್ ಚೆಕ್: ಭಾರತದ ರಫೆಲ್ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತೆ?
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಕದನವಿರಾಮ ಉಲ್ಲಂಘಿಸುತ್ತಿರುವುದರ ನಡುವೆಯೇ ಪೂಂಛ್ ವಲಯದ ಎಲ್‌ಒಸಿಯಲ್ಲಿ ಭಾರತದ ರಫೆಲ್ ಯುದ್ಧವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ಪ್ರತಿಪಾದಿಸುತ್ತಾ ನೆಲಕ್ಕೆ ಬಿದ್ದ ಯುದ್ಧವಿಮಾನವೊಂದು ಹೊತ್ತಿ ಉರಿಯುತ್ತಿರುವ ವಿಡಿಯೊವೊಂದನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಇದು ಸುಳ್ಳು.
ವಿಡಿಯೊದ ಕೀ ಫ್ರೇಮ್‌ಗಳ ಪೈಕಿ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿದಾಗ 2024ರ ಜೂನ್ 4ರಂದು ಇಟಿನೌ ಸುದ್ದಿ ವಾಹಿನಿ ಇದೇ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವುದು ಸಿಕ್ಕಿತು. ಈ ವಿಡಿಯೊ ಇತ್ತೀಚಿನದ್ದಲ್ಲ ಎಂಬುದು ಇದರಿಂದ ದೃಢಪಟ್ಟಿತು. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭಾರತೀಯ ವಾಯು ಪಡೆಯ ಸುಖೋಯ್ ಯುದ್ಧವಿಮಾನ ಪತನವಾಗಿದ್ದರ ದೃಶ್ಯ ಅದಾಗಿತ್ತು. ಈ ಬಗ್ಗೆ ಹುಡುಕಾಟ ನಡೆಸಿದಾಗ ಹಲವು ಮಾಧ್ಯಮಗಳು ವಿಮಾನ ಪತನದ ಸುದ್ದಿಯನ್ನು ವರದಿ ಮಾಡಿದ್ದವು. ಈ ವಿಡಿಯೊಗೂ ರಫೆಲ್ ಯುದ್ಧವಿಮಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.