ADVERTISEMENT

Fact check: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ದುರಂತ; ಚಾಲಕನ ಹೆಸರು ಫಿರೋಜ್ ಅಲ್ಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 19:30 IST
Last Updated 14 ಸೆಪ್ಟೆಂಬರ್ 2025, 19:30 IST
...
...   

ಇದೇ ಸೆ.12ರಂದು ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಟ್ರಕ್ ಹರಿದು 10 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದ ವಿಡಿಯೊ ಅನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಟ್ರಕ್ ಚಾಲಕನ ಹೆಸರು ಮೊಹಮ್ಮದ್ ಫಿರೋಜ್ ಎಂದು ಕೆಲವರು ಪ್ರತಿಪಾದಿಸಿದರೆ, ಮತ್ತೆ ಕೆಲವರು, ಇದು ಇಸ್ಲಾಮಿಕ್ ಉಗ್ರವಾದಿಗಳ ದಾಳಿ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಘಟನೆಯ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರ ಎಫ್‌ಐಆರ್ ‘ಪ್ರಜಾವಾಣಿ’ ಪತ್ರಿಕೆಗೆ ಲಭ್ಯವಾಗಿದೆ. ಅದರಲ್ಲಿ ಟ್ರಕ್ ಚಾಲಕನ ಹೆಸರು ಭುವನೇಶ್ ಎಂದು ನಮೂದಾಗಿದೆ. ಜತೆಗೆ, ಹಾಸನದ ಎಸ್‌ಪಿ ಮೊಹಮ್ಮದ್ ಸುಜೀತಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ಟ್ರಕ್ ಚಾಲಕನ ಧರ್ಮದ ಬಗ್ಗೆ ಕೋಮು ಆಯಾಮದ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಅವು ಸುಳ್ಳು ಸುದ್ದಿಗಳಾಗಿದ್ದು, ಆರೋಪಿ ಹೆಸರು ಭುವನೇಶ್’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT