ADVERTISEMENT

Fact Check: ಇಸ್ರೇಲ್‌ ಪ್ರಧಾನಿ ಆಸ್ಪತ್ರೆಯಲ್ಲಿರುವ ಫೋಟೊ ಎಐ ಸೃಷ್ಟಿ

ಫ್ಯಾಕ್ಟ್ ಚೆಕ್
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
   

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೊವನ್ನು ಹಂಚಿಕೊಂಡ ಸಾವಿರಾರು ಜನರು, ‘ಗೋ ಟು ಹೆಲ್‌’ (ನರಕಕ್ಕೆ ಹೋಗು) ಎಂದು ಪೋಸ್ಟ್‌ ಮಾಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ. 

ಬೆಂಜಮಿನ್‌ ನೆತನ್ಯಾಹು ಅವರು ಕಳೆದ ವಾರ ಹರ್ನಿಯಾ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಗ್ಗೆ ಇಸ್ರೇಲ್‌ ಪ್ರಧಾನಿಯವರ ಅಧಿಕೃತ ‘ಎಕ್ಸ್‌’ ಖಾತೆ ಮಾಹಿತಿ ನೀಡಿತ್ತು. ಆದರೆ, ಜಾಲತಾಣಗಳಲ್ಲಿ ಹರಿದಾಡುತ್ತಿರುವ ರೀತಿಯ ಫೋಟೊವು ಪ್ರಧಾನಿ ಅವರ ‘ಎಕ್ಸ್‌’ ಖಾತೆಯಲ್ಲಿ ಇಲ್ಲ. ನಂತರ, ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ ಫೋಟೊಗಳನ್ನು ಪತ್ತೆ ಮಾಡುವ ತಂತ್ರಾಂಶವನ್ನು ಉಪಯೋಗಿಸಿ ಪರೀಕ್ಷಿಸಲಾಯಿತು. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊವು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ ಫೋಟೊ ಎಂಬ ಫಲಿತಾಂಶ ಬಂದಿತು ಎಂದು ‘ದಿ ಕ್ವಿಂಟ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT