ADVERTISEMENT

ಫ್ಯಾಕ್ಟ್ ಚೆಕ್: ನಿಕಿತಾ ಜೇಕಬ್ ಎಎಪಿ ಕಾರ್ಯಕರ್ತೆಯೇ?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 19:30 IST
Last Updated 16 ಫೆಬ್ರುವರಿ 2021, 19:30 IST
ನಿಕಿತಾ ಜೇಕಬ್ ಹೆಸರಿನಲ್ಲಿ ಬಳಕೆಯಾಗಿರುವ ಎಎಪಿ ಕಾರ್ಯಕರ್ತೆಯ ಚಿತ್ರ
ನಿಕಿತಾ ಜೇಕಬ್ ಹೆಸರಿನಲ್ಲಿ ಬಳಕೆಯಾಗಿರುವ ಎಎಪಿ ಕಾರ್ಯಕರ್ತೆಯ ಚಿತ್ರ   

ಟೂಲ್‌ಕಿಟ್ ಪ್ರಕರಣದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ನಿಕಿತಾ ಜೇಕಬ್ ಅವರು ಎಎಪಿ ಕಾರ್ಯಕರ್ತರೇ? ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ನಿಕಿತಾ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ನೂರಾರು ಜನರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ. ‘ಈ ಸಂಬಂಧಕ್ಕೆ ಏನು ಹೇಳುತ್ತೀರಿ’ ಎಂದು ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಪ್ರಶ್ನಿಸಿದ್ದಾರೆ.

ಚಿತ್ರದಲ್ಲಿ ಅರವಿಂದ ಕೇಜ್ರಿವಾಲ್ ಅವರ ಜೊತೆ ಇರುವುದು ನಿಕಿತಾ ಜೇಕಬ್ ಅಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಯು ತಿಳಿಸಿದೆ. ಚಿತ್ರದಲ್ಲಿರುವುದು ಎಎಪಿ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಂಕಿತಾ ಶಾ. ಈ ಚಿತ್ರವನ್ನು ಅವರು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ 2019ರಲ್ಲಿ ಹಂಚಿಕೊಂಡಿದ್ದರು. ನಿಕಿತಾ ಮತ್ತು ಅಂಕಿತಾ ಅವರ ಮುಖದ ಹೋಲಿಕೆಯಲ್ಲೂ ಸಾಮ್ಯತೆ ಕಂಡುಬಂದಿಲ್ಲ. ನಿಕಿತಾ ಹೆಸರಲ್ಲಿ ಹರಿದಾಡುತ್ತಿರುವ ಚಿತ್ರ ಅವರದ್ದಲ್ಲ ಎಂದು ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT