ADVERTISEMENT

ಫ್ಯಾಕ್ಟ್ ಚೆಕ್: ಇದು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಚಿತ್ರವೇ?

ಫ್ಯಾಕ್ಟ್ ಚೆಕ್
Published 6 ಜನವರಿ 2026, 19:11 IST
Last Updated 6 ಜನವರಿ 2026, 19:11 IST
<div class="paragraphs"><p>ಫ್ಯಾಕ್ಟ್ ಚೆಕ್: ಇದು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಚಿತ್ರವೇ?</p></div>

ಫ್ಯಾಕ್ಟ್ ಚೆಕ್: ಇದು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಚಿತ್ರವೇ?

   

ಅಮೆರಿಕದ ಬಂದೂಕುಧಾರಿ ಸೈನಿಕರು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರ ಮನೆಗೆ ನುಗ್ಗಿ ಅವರನ್ನು ಮತ್ತು ಅವರ ಪತ್ನಿಯನ್ನು ಸೆರೆಹಿಡಿದು, ವಿಮಾನದಲ್ಲಿ ಕರೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಆಪರೇಷನ್ ಆ್ಯಬ್ಸಲ್ಯೂಟ್ ರಿಸಾಲ್ವ್’ನ ನಿಜವಾದ ವಿಡಿಯೊ ಎಂದು ಕೆಲವರು ಅದನ್ನು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ವಾಸ್ತವ ಅಲ್ಲ.

ಇನ್‌ವಿಡ್ ಸಾಧನದ ಮೂಲಕ ವಿಡಿಯೊದ ಕೀಫ್ರೇಮ್‌ಗಳನ್ನು ಪ್ರತ್ಯೇಕಿಸಿ, ಅವುಗಳನ್ನು ಗೂಗಲ್ ಲೆನ್ಸ್ ಮೂಲಕ ವಿಶ್ಲೇಷಣೆಗೊಳಪಡಿಸಿದಾಗ, ಇದೇ ವಿಡಿಯೊ ಅನ್ನು ಹಲವರು ಇಂತಹುದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡಿತು. ಇದನ್ನೇ ಹೋಲುವ ವಿಡಿಯೊ ಅನ್ನು ಹೋರೆ ವಿಯೆರೊ ಎನ್ನುವ ವ್ಯಕ್ತಿಯು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 2025ರ ಜ.5ರಂದು ಹಂಚಿಕೊಂಡಿರುವುದು ಕಂಡಿತು. ಇದು ಪುನರ್ ಸೃಷ್ಟಿ ಮಾಡಲಾದ ವಿಡಿಯೊ ಆಗಿದ್ದು, ವಾಸ್ತವಿಕವಾದುದಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ಹೈವ್ ಮಾಡರೇಷನ್ ಎಐ ಪತ್ತೆ ಟೂಲ್ ಮೂಲಕ ಪರಿಶೀಲಿಸಿದಾಗ, ವಿಡಿಯೊ ಎಐ ಸೃಷ್ಟಿ ಆಗಿರುವ ಸಾಧ್ಯತೆ ಶೇ 86ರಷ್ಟು ಎನ್ನುವುದು ತಿಳಿಯಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ಮಾಧ್ಯಮಗಳು ಹಂಚಿಕೊಂಡಿರುವ ಮಡೂರೊ ಅವರ ಚಿತ್ರಗಳಿಗಿಂತಲೂ ವಿಡಿಯೊದಲ್ಲಿರುವ ಚಿತ್ರಗಳು ಭಿನ್ನವಾಗಿವೆ. ಎಐ ರೂಪಿತ ವಿಡಿಯೊ ಅನ್ನು ವಾಸ್ತವಿಕವಾದುದು ಎಂದು ಕೆಲವರು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.