ADVERTISEMENT

Fact Check: ವರುಣ್ ಗಾಂಧಿ ಟ್ವಿಟರ್‌ನಲ್ಲಿ ‘ಬಿಜೆಪಿ’ ಮಾಯ?

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 14:33 IST
Last Updated 6 ಅಕ್ಟೋಬರ್ 2021, 14:33 IST
   

ಬಿಜೆಪಿಸಂಸದವರುಣ್ಗಾಂಧಿಅವರು ತಮ್ಮ ಟ್ವಿಟರ್ ‘ಬಯೊ’ದಲ್ಲಿ ‘ಬಿಜೆಪಿ’ ಪದವನ್ನು ತೆಗೆದುಹಾಕಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡಿದೆ. ಲಖಿಂಪುರ–ಖೇರಿ ಹಿಂಸಾಚಾರದ ಬಳಿಕ ಈ ವಿದ್ಯಮಾನ ಜರುಗಿದೆ ಎನ್ನಲಾಗಿದೆ. ಘಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಪಕ್ಷದ ಹೆಸರನ್ನು ತೆಗೆದುಹಾಕಿರುವ ಅವರುಬಿಜೆಪಿತೊರೆಯುವ ಮುನ್ಸೂಚನೆ ಎಂಬ ಅರ್ಥದಲ್ಲಿ ಚರ್ಚೆಯಾಗುತ್ತಿದೆ.

ವರುಣ್ಗಾಂಧಿಅವರ ಟ್ವಿಟರ್ ಖಾತೆಯ ‘ಬಯೊ’ದಲ್ಲಿಬಿಜೆಪಿಪದ ಅಳಿಸಿದ್ದಾರೆ ಎಂಬುದು ಸರಿಯಾದ ಮಾಹಿತಿ ಅಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅವರು 2014ಕ್ಕಿಂತ ಮೊದಲು ತಮ್ಮ ಬಯೊದಲ್ಲಿಬಿಜೆಪಿಪದ ಉಲ್ಲೇಖಿಸಿದ್ದರು. ಆ ಬಳಿಕ ಅದರ ಉಲ್ಲೇಖವಿರಲಿಲ್ಲ. 2019ರಲ್ಲಿ ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಕ್ಷೇತ್ರ ‘ಪಿಲಿಭಿತ್’ ಹೆಸರನ್ನು ಸೇರಿಸಿದ್ದನ್ನು ಹೊರತುಪಡಿಸಿದರೆ, ಬೇರೇನನ್ನೂ ಅವರು ಸೇರಿಸಿಲ್ಲ ಅಥವಾ ತೆಗೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT