ADVERTISEMENT

ಫ್ಯಾಕ್ಟ್‌ಚೆಕ್‌: ಯುವಕ ವಿಮಾನ ನಿಲ್ದಾಣದ ಒಳಗೆ ಮೂತ್ರ ವಿಸರ್ಜಿಸಿದ ವಿಡಿಯೊ ನಿಜವೇ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 3:52 IST
Last Updated 6 ಜನವರಿ 2022, 3:52 IST
   

ಪಾನಮತ್ತನಂತೆ ಕಂಡುಬರುವ ಯುವಕನೊಬ್ಬ ವಿಮಾನ ನಿಲ್ದಾಣದ ಒಳಗೆ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿದೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ಯುವಕನ ಕೈಗೆ ಬೇಡಿ ತೊಡಿಸಿ ಆತನನ್ನು ಎಳೆದುಕೊಂಡು ಹೋಗುವ ದೃಶ್ಯವೂ ವಿಡಿಯೊದಲ್ಲಿ ಇದೆ. ಈ ವಿಡಿಯೋದಲ್ಲಿ ಇರುವ ಯುವಕ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಎಂದು ಹೇಳಲಾಗಿದೆ. ಆರ್ಯನ್ ಖಾನ್ ಇತ್ತೀಚೆಗಷ್ಟೇ ಮಾದಕವಸ್ತು ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ‘ಏರ್‌ಪೋರ್ಟ್‌ನಲ್ಲಿ ಶಾರುಕ್‌ ಖಾನ್ ಮಗ ಆರ್ಯನ್‌ ಖಾನ್‌ನ ವರ್ತನೆ ಇದು. ಅವನು ಮುಗ್ಧ ಬಾಲಕ ಎಂದು ರಾಜಕಾರಣಿಗಳು ಈಗಲೂ ಹೇಳುತ್ತಾರೆ’ ಎಂದು ವಿಡಿಯೊಗೆ ಅಡಿಬರಹ ನೀಡಲಾಗಿದೆ.

ಈ ವಿಡಿಯೊದಲ್ಲಿರುವ ವ್ಯಕ್ತಿಯು ವಿದೇಶಿ ವ್ಯಕ್ತಿ ಎಂದು ಆಲ್ಟ್‌ನ್ಯೂಸ್‌ ವರದಿ ಮಾಡಿದೆ. ಈ ಪ್ರಕರಣ ಕುರಿತ ವರದಿಯು 2013ರ ಜ.3ರಂದು ಡೇಲಿ ಮೇಲ್‌ನಲ್ಲಿ ಪ್ರಕಟವಾಗಿತ್ತು. ಈ ಘಟನೆ 2012ರ ಡಿ.17ರಂದೇ ನಡೆದಿದೆ. ಏರ್‌ಪೋರ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯನ್ನು ‘ಟ್ವಿಲ್ಟ್‌ ಸಾಗಾ’ ಚಿತ್ರದ ನಟ ಬ್ರೋನ್ಸನ್‌ ಪೆಲ್ಲೆಟಿಯೆರ್‌ ಎಂದು ಹೇಳಲಾಗಿದೆ. ಮೊದಲಿಗೆ ಈ ಆರೋಪವನ್ನು ಬ್ರೋನ್ಸನ್‌ ಅಲ್ಲಗಳೆದಿದ್ದರು. ಬಳಿಕ ಅಭಿಮಾನಿಯೊಬ್ಬರು ತಂದುಕೊಟ್ಟ ಮದ್ಯ ಸೇವಿಸಿದ ಕಾರಣ ಹೀಗೆ ವರ್ತಿಸಿದೆ ಎಂದು ಕೋರ್ಟ್‌ ಎದುರು ಒಪ್ಪಿಕೊಂಡಿದ್ದರು. ಬಳಿಕ ಶಿಕ್ಷೆಗೂ ಗುರಿಯಾಗಿದ್ದರು ಎಂದು ಆಲ್ಟ್‌ನ್ಯೂಸ್ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT