
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನವು ಅಪಘಾತಕ್ಕೀಡಾದ ಸಂದರ್ಭದ ವಿಡಿಯೊ ಎಂದು ಪ್ರತಿಪಾದಿಸುತ್ತಾ ಫೇಸ್‌ಬುಕ್ ಬಳಕೆದಾರರೊಬ್ಬರು ವಿಡಿಯೊ ತುಣುಕನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದಿಂದ ಕೀ ಪ್ರೇಮ್ ಒಂದನ್ನು ಪ್ರತ್ಯೇಕಿಸಿ ಅದನ್ನು ರಿವರ್ಸ್ ಸರ್ಚ್ ವಿಧಾನದ ಮೂಲಕ ಹುಡುಕಾಟ ನಡೆಸಿದಾಗ 2025ರಂದು ಪ್ರಕಟವಾದ ಹಲವು ವರದಿಗಳು ಸಿಕ್ಕಿದವು. ಅದು ವೆನೆಜುವೆಲಾದ ಟಾಚಿರಾದ ಪಾರಾಮಿಲ್ಲೊ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದ ವರದಿಗಳಾಗಿದ್ದವು. ಅವುಗಳ ಪ್ರಕಾರ, ಎರಡು ಎಂಜಿನ್‌ಗಳ ಪೈಪರ್ 3ಎ–321ಟಿ1 ಛೆಯೆನ್ನೆ ವಿಮಾನವು 2025ರ ಅಕ್ಟೋಬರ್ 23ರಂದು ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲಿ ಪತನಕ್ಕೀಡಾಗಿತ್ತು. ಈಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊವನ್ನೇ ‘ಅಲ್ ಜಝೀರಾ ಇಂಗ್ಲಿಷ್’ನ ಎಕ್ಸ್ ಖಾತೆಯಲ್ಲಿ ಅದೇ ದಿನ ಪೋಸ್ಟ್ ಮಾಡಲಾಗಿತ್ತು. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಪವಾರ್ ಅವರಿದ್ದ ವಿಮಾನ ಅಪಘಾತದ್ದಲ್ಲ, ವೆನೆಜುವೆಲಾದಲ್ಲಿ ನಡೆದ ಅಪಘಾತದ ವಿಡಿಯೊ ಎಂದು ಮಹಾರಾಷ್ಟ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾ ನಿರ್ದೇಶಕರ ಕಚೇರಿ ಸ್ಪಷ್ಟನೆಯನ್ನೂ ನೀಡಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.