ADVERTISEMENT

ಫ್ಯಾಕ್ಟ್‌ ಚೆಕ್‌: ವಂದೇ ಭಾರತ್‌ ರೈಲಿನ ಮೇಲೆ ಶ್ರೀರಾಮನ ಬೃಹತ್ ಚಿತ್ರ ಬಿಡಿಸಿಲ್ಲ

ಫ್ಯಾಕ್ಟ್ ಚೆಕ್
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
   

ವಂದೇ ಭಾರತ್‌ ಮತ್ತು ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ಗಳಲ್ಲಿ ಶ್ರೀರಾಮನ ಬೃಹತ್‌ ಚಿತ್ರವನ್ನು ಬಿಡಿಸಿರುವ ಎರಡು ಫೋಟೊಗಳ ಕೊಲಾಜ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ಎಂಜಿನ್‌ಗಳಿಗೆ ಕೇಸರಿ ಬಣ್ಣ ಬಳಿದು, ಅದರ ಮೇಲೆ ಶ್ರೀರಾಮನ ಚಿತ್ರ ಬಿಡಿಸಲಾಗಿದೆ. ‘ಶ್ರೀರ್‌’, ‘ಶ್ರೀ ರಾಮ್‌’ ಎಂದು ಬರೆಯುವುದರ ಜೊತೆಗೆ ತ್ರಿವರ್ಣದ ಧ್ವಜವನ್ನೂ ಬಿಡಿಸಿರುವುದು ಕೊಲಾಜ್‌ ಚಿತ್ರದಲ್ಲಿ ಕಾಣಿಸುತ್ತಿದೆ. ಆದರೆ, ಇದು ನಿಜವಲ್ಲ. 

ಚಿತ್ರವನ್ನು ಸ್ಕ್ಯಾನ್‌ ಮಾಡಿ ಪರಿಶೀಲಿಸಿದಾಗ ಅದರಲ್ಲಿ @ ದಿ ರೇಲ್‌ ಪೈಲಟ್ ಎಂಬ ವಾಟರ್‌ ಮಾರ್ಕ್‌ ಇರುವುದು ಕಂಡು ಬಂತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಅದೇ ಹೆಸರಿನಲ್ಲಿರುವ ಇನ್‌ಸ್ಟಾಗ್ರಾಂ ಖಾತೆ ಕಂಡು ಬಂತು. ಅದರಲ್ಲಿ ಮಾಡಲಾದ ಪೋಸ್ಟ್‌ಗಳನ್ನು ಪರಿಶೀಲಿಸಿದಾಗ ಈಗ ಹಂಚಿಕೊಳ್ಳಲಾಗುತ್ತಿರುವ ಚಿತ್ರ ಸಿಕ್ಕಿತು. ಈ ಚಿತ್ರಗಳನ್ನು ಕೃತಕ ಬುದ್ಧಮತ್ತೆ ತಂತ್ರಜ್ಞಾನದಲ್ಲಿ ಸೃಷ್ಟಿಸಲಾಗಿದೆ ಎಂಬ ಒಕ್ಕಣೆಯೂ ಅದರ ಶೀರ್ಷಿಕೆಯಲ್ಲಿತ್ತು. ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರಗಳನ್ನು ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಹೈವ್‌ ಮಾಡರೇಷನ್‌ ಟೂಲ್‌ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅವುಗಳು ಎಐ ಚಿತ್ರ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT