ADVERTISEMENT

ಗೃಹ ಸಚಿವ ಅಮಿತ್ ಶಾಗೆ ಕೊರೊನಾ ಸೋಂಕು ತಗುಲಿದೆ ಎಂಬುದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 17:48 IST
Last Updated 30 ಮಾರ್ಚ್ 2020, 17:48 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್   
""
""
""
""
""
""

ಬೆಂಗಳೂರು:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದುಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದೆ ಎನ್ನುವ ಎರಡು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮಿಲಿಟರಿ ಅಧಿಕಾರಿಯೊಂದಿಗೆ ಶಾ ನಿಂತಿರುವ ಫೋಟೊವೊಂದರ ಕೆಳಗೆ ಬ್ರೇಕಿಂಗ್ ನ್ಯೂಸ್ ಗೃಹಮಂತ್ರಿ ಅಮಿತ್ ಶಾ ಕೊರೊನಾ ಕೀ ಚಪೆಟ್ ಮೇ(ಗೃಹ ಸಚಿವರಿಗೂ ತಗುಲಿದ ಕೊರೊನಾವೈರಸ್ ಸೋಂಕು) ಎಂದು ಹಿಂದಿಯಲ್ಲಿ ಬರೆಯಲಾಗಿದೆ.


ಇನ್ನೊಂದು ಸ್ಕ್ರೀನ್‌ಶಾಟ್‌ನಲ್ಲಿ ಅಮಿತ್ ಶಾಗೆ ಕೊರೊನಾ ಸೋಂಕು, ಆಸ್ಪತ್ರೆಗೆ ದಾಖಲು ಎಂದಿದೆ. ಈ ಎರಡು ವೈರಲ್ ಚಿತ್ರಗಳ ಫ್ಯಾಕ್ಟ್‌‌ಚೆಕ್ ಮಾಡಿದ ಆಲ್ಟ್‌ನ್ಯೂಸ್ ಇದು ಸುಳ್ಳು ಸುದ್ದಿ ಎಂದಿದೆ.

ADVERTISEMENT

ಫ್ಯಾಕ್ಟ್‌ಚೆಕ್
ಅಮಿತ್ ಶಾ ಚಿತ್ರ ಇರುವ ಮೊದಲ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಆಜ್ ತಕ್ ವಾಹಿನಿಯ ಲೋಗೊ ಕಾಣಬಹುದು. ಲೋಗೊ ಬಳಿ ಜೂಮ್ ಮಾಡಿ ನೋಡಿದರೆ ಅಲ್ಲಿರುವ ವ್ಯಕ್ತಿಯ ಮುಖದ ಮೇಲೆ ಬ್ಲರ್ ಆಗಿರುವ ಪಟ್ಟಿಯೊಂದು ಕಾಣಿಸುತ್ತದೆ.ಈ ಚಿತ್ರವನ್ನು 'ಬ್ರೇಕ್ ಯುವರ್ ಓನ್ ನ್ಯೂಸ್' ಎಂಬ ಮೀಮ್ ಜನರೇಟರ್‌ನಲ್ಲಿ ಎಡಿಟ್ ಮಾಡಲಾಗಿದೆ.

ಹೀಗೆ ಯಾವುದಾದರೊಂದು ಚಿತ್ರವನ್ನು ಈ ಮೀಮ್ ಎಡಿಟರ್‌ನಲ್ಲಿ ಎಡಿಟ್ ಮಾಡಿದಾಗ 'breakyourownnews.com’ ಎಂಬ ವಾಟರ್‌ಮಾರ್ಕ್ ಕಾಣಿಸುತ್ತದೆ. ಈ ವಾಟರ್‌ಮಾರ್ಕ್ ಮುಚ್ಚಿಡುವುದಕ್ಕಾಗಿ ಅಲ್ಲಿ ಆಜ್ ತಕ್ ಲೋಗೊ ಬಳಸಿ ಪಕ್ಕದಲ್ಲಿರುವ ವ್ಯಕ್ತಿಯ ಮುಖ ಬ್ಲರ್ ಮಾಡಲಾಗಿದೆ.

ಈ ಚಿತ್ರದಲ್ಲಿ ಅಮಿತ್ ಶಾ ಪಕ್ಕದಲ್ಲಿರುವ ವ್ಯಕ್ತಿ ಬಿಜೆಪಿಸದಸ್ಯ ಆಶಿಶ್ ಶೇಲರ್ , ಈ ಸುಳಿವನ್ನು ಇಟ್ಟುಕೊಂಡೇ ಗೂಗಲ್‌ನಲ್ಲಿ ಕೀವರ್ಡ್ ನೀಡಿ ಸರ್ಚ್ ಮಾಡಿದಾಗ 2014ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಸಿಕ್ಕಿದೆ. ಈ ವರದಿ ಪ್ರಕಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ತೊಡೆ ಸರ್ಜರಿ ಆದಾಗ ಅಮಿತ್ ಶಾ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಹೋಗಿ ಭೇಟಿ ನೀಡಿದ್ದರು.

ಎರಡನೇ ಚಿತ್ರದಲ್ಲಿಸಚ್ ನ್ಯೂಸ್ ವಾಹಿನಿಯ ಲೋಗೊ ಇದೆ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರದಡಿಯಲ್ಲಿರುವ ಪೇಯ್ಡ್ ಮತ್ತು ಉಚಿತ ಟಿವಿ ವಾಹಿನಿಗಳ ಪಟ್ಟಿ ತೆಗೆದು ನೋಡಿದರೆ ಅದರಲ್ಲಿ ಸಚ್ ನ್ಯೂಸ್ ಎಂಬ ಹೆಸರಿನ ವಾಹಿನಿಯೇ ಇಲ್ಲ. ಅಂದಹಾಗೆ ಚಿತ್ರದ ಹಿನ್ನೆಲೆಯಲ್ಲಿ ಎಬಿಪಿ ನ್ಯೂಸ್ ಎಂದು ಇದೆ.


ಎಬಿಪಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುವ ಸುದ್ದಿ ಈ ರೀತಿ ಇರುತ್ತದೆ.


ಅಂದಹಾಗೆ ಸಚ್ ನ್ಯೂಸ್ ಎಂಬ ಆನ್‌ಲೈನ್ ಸುದ್ದಿ ಮಾಧ್ಯಮ ಇದೆ. ಆದರೆ ಅದರ ಲೋಗೊ ಬೇರೆ ರೀತಿ ಇದೆ.

ಹಾಗಾಗಿ ವೈರಲ್ ಆಗಿರುವ ಎರಡೂ ಸ್ಕ್ರೀನ್‌ಶಾಟ್‌ಗಳು ಫೇಕ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.