ADVERTISEMENT

ಫ್ಯಾಕ್ಟ್‌ಚೆಕ್‌: ನೌಕೆ ಕಳುಹಿಸಿರುವ ವಿಡಿಯೊವನ್ನು ನಾಸಾ ಬಿಡುಗಡೆ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 17:44 IST
Last Updated 22 ಫೆಬ್ರುವರಿ 2021, 17:44 IST
   

ಮಂಗಳ ಗ್ರಹಕ್ಕೆ ನಾಸಾ ಕಳುಹಿಸಿರುವ ಪರ್ಸಿವಿಯರೆನ್ಸ್ ರೋವರ್ ನೌಕೆಯು, ಮಂಗಳ ಗ್ರಹದ ಮೇಲ್ಮೈನ ವಿಡಿಯೊವನ್ನು ಕಳುಹಿಸಿದೆ ಎಂಬ ಪೋಸ್ಟ್‌ಗಳು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ. ರೋವರ್‌ನಂತಹ ನೌಕೆಯು ಮಂಗಳ ಗ್ರಹದ ಮೇಲ್ಮೈ ಅನ್ನು ಬಲದಿಂದ ಎಡಕ್ಕೆ ತಿರುಗಿ ನೋಡುವ ದೃಶ್ಯವು ಆ ವಿಡಿಯೊದಲ್ಲಿ ಇದೆ. ಜತೆಗೆ ಅಲ್ಲಿ ಜೋರಾಗಿ ಬೀಸುವ ಗಾಳಿಯ ಸದ್ದೂ ಆ ವಿಡಿಯೊದಲ್ಲಿ ಕೇಳುತ್ತದೆ. ಸಾವಿರಾರು ಕನ್ನಡಿಗರೂ ಈ ವಿಡಿಯವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಮತ್ತು ಪೋಸ್ಟ್‌ಗಳು 10 ಲಕ್ಷಕ್ಕೂ ಹೆಚ್ಚು ಬಾರಿ ಷೇರ್ ಆಗಿವೆ.

ಆದರೆ, ಪರ್ಸಿವಿಯರೆನ್ಸ್ ನೌಕೆ ಕಳುಹಿಸಿರುವ ಯಾವುದೇ ವಿಡಿಯೊವನ್ನು ನಾಸಾ ಈವರೆಗೆ ಬಿಡುಗಡೆ ಮಾಡಿಲ್ಲ. ನಾಸಾ ಈ ಹಿಂದೆ ಮಂಗಳ ಗ್ರಹಕ್ಕೆ ಕಳುಹಿಸಿದ್ದ ಕ್ಯೂರಿಯಾಸಿಟಿ ರೋವರ್ ನೌಕೆಯು ಕಳುಹಿಸಿದ್ದ ವಿಡಿಯೊವನ್ನೇ, ಪರ್ಸಿವಿಯರೆನ್ಸ್ ನೌಕೆ ಕಳುಹಿಸಿರುವ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೊದಲ್ಲಿ ಯಾವುದೇ ಧ್ವನಿ ಇಲ್ಲ. ಅದನ್ನು ಬೇರೆ ಸದ್ದನ್ನು ಎಡಿಟ್ ಮಾಡಿ, ವಿಡಿಯೊಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT