ADVERTISEMENT

ಗಾಲ್ವನ್ ಸಂಘರ್ಷದ ಬಳಿಕ ಚೀನಾ–ಪಾಕ್‌ ಸೈನಿಕರು ಸಂಭ್ರಮಿಸಿದ್ದು ನಿಜವೇ?

ಗಡಿ ವಿವಾದ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 19:30 IST
Last Updated 3 ಜುಲೈ 2020, 19:30 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   
""

ಗಾಲ್ವನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಸೈನಿಕರನ್ನು ಹತ್ಯೆ ಮಾಡಿದ ಬಳಿಕ ಚೀನಾ ಹಾಗೂ ಪಾಕಿಸ್ತಾನದ ಸೈನಿಕರು ಒಂದಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಸೇನಾ ಸಮವಸ್ತ್ರದಲ್ಲಿ ಕೈಯಲ್ಲಿ ಬಂದೂಕು ಹಿಡಿದು ಹಾಡುತ್ತಾ ಕುಣಿಯುತ್ತಾ ಪರಸ್ಪರ ಸಂತಸ ಹಂಚಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ಚೀನಾದಲ್ಲಿ ಸಾಕಷ್ಟು ಬಾರಿ ಟ್ವೀಟ್ ಆಗಿದೆ.

ಈ ವಿಡಿಯೊವನ್ನು 2018ರಲ್ಲಿ ಚಿತ್ರೀಕರಿಸಲಾಗಿದೆ ಎಂದು ‘ಲಾಜಿಕಲ್ ಇಂಡಿಯನ್ಸ್’ ವೆಬ್‌ಸೈಟ್ ವರದಿ ಮಾಡಿದೆ. ಐಗ್ನರ್ ಎಂಬ ಪ್ರವಾಸಿಗ ಪಾಕಿಸ್ತಾನದ ಗಡಿಯಿಂದ ಚೀನಾವನ್ನು ಪ್ರವೇಶಿಸುತ್ತಿರುವಾಗ ವಿಡಿಯೊ ಚಿತ್ರೀಕರಿಸಿದ್ದರು. ಸುಮಾರು 25 ನಿಮಿಷಗಳ ವಿಡಿಯೊದಲ್ಲಿ ಸೈನಿಕರು ನೃತ್ಯ ಮಾಡುತ್ತಿರುವ ಒಂದು ತುಣುಕು ಬಂದು ಹೋಗುತ್ತದೆ. ಚೀನಾ–ಪಾಕಿಸ್ತಾನ ಸೈನಿಕರ ನಡುವಿನ ಸೌಹಾರ್ದ ಹೀಗಿದೆ ನೋಡಿ ಎಂದು ವಿಡಿಯೊದಲ್ಲಿ ಪ್ರಸ್ತಾಪಿಸಲಾಗಿದೆ. ಸಂಭ್ರಮಾಚರಣೆ ಮಾಡುತ್ತಿರುವ ತುಣಕನ್ನು ಮಾತ್ರ ಎತ್ತಿಕೊಂಡು, ಅದನ್ನು ಗಾಲ್ವನ್ ಘರ್ಷಣೆಯ ಜತೆ ಜೋಡಿಸಲಾಗಿದೆಎಂದು ವೆಬ್‌ಸೈಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT