ADVERTISEMENT

Fact Check: RSS ಶತಮಾನೋತ್ಸವಕ್ಕೆ ಕೇಸರಿ ಬಣ್ಣದ ಐಫೋನ್‌ ಬಿಡುಗಡೆಯಾಗಿಲ್ಲ

ಫ್ಯಾಕ್ಟ್ ಚೆಕ್
Published 15 ಸೆಪ್ಟೆಂಬರ್ 2025, 22:30 IST
Last Updated 15 ಸೆಪ್ಟೆಂಬರ್ 2025, 22:30 IST
.
.   

ಆ್ಯಪಲ್‌ ಕಂಪನಿಯು ಇತ್ತೀಚೆಗೆ 17ನೇ ಸರಣಿಯ ಐಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕೇಸರಿ ಬಣ್ಣದ ಐಫೋನ್‌ 17 ಅನ್ನು ನಾವು ಬಿಡುಗಡೆ ಮಾಡಿದ್ದೇವೆ’ ಎಂದು ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಅವರು ‘ಎಕ್ಸ್‌’ನಲ್ಲಿ ಘೋಷಣೆ ಮಾಡಿದ್ದಾರೆ ಎನ್ನಲಾದ ಪೋಸ್ಟ್‌ ಒಂದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ. 

‘ವೋಕ್‌ಫ್ಲಿಕ್ಸ್‌’ ಎಂಬ ಪ್ಯಾರಡಿ (parody) ಖಾತೆಯಲ್ಲಿ ಮೊದಲು ಕುಕ್‌ ಅವರದ್ದೆನ್ನಲಾದ ಪೋಸ್ಟ್‌ ಅನ್ನು ಹಂಚಲಾಗಿತ್ತು. ನಂತರ ಹಲವರು ಅದನ್ನು ಹಂಚಿಕೊಂಡಿದ್ದಾರೆ. ‘ವೋಕ್‌ಫ್ಲಿಕ್ಸ್‌’ನ ಎಕ್ಸ್‌ ಖಾತೆಯನ್ನು ಪರಿಶೀಲಿಸಿದಾಗ, ಅದರ ವಿವರದಲ್ಲಿ  ‘ನನ್ನನ್ನು ಗಂಭೀರವಾಗಿ ಪರಿಗಣಿಸಬೇಡಿ. ನಾನು ಪೋಸ್ಟ್‌ ಮಾಡುವ ಎಲ್ಲವೂ ಬಹುತೇಕ ನಿಜ’ ಎಂದು ಬರೆಯಲಾಗಿದೆ.

ಇದೊಂದು ವಿಡಂಬನೆ ಮಾಡುವ ಖಾತೆಯಾಗಿದ್ದು, ಇಂತಹ ಹಲವು ಪೋಸ್ಟ್‌ಗಳನ್ನು ಖಾತೆಯಲ್ಲಿ ಹಂಚಲಾಗಿದೆ. ಟಿಮ್‌ ಕುಕ್‌ ಅವರು ಇಂತಹ ಪೋಸ್ಟ್‌ ಮಾಡಿದ್ದಾರೆಯೇ ಎಂದು ಪರಿಶೀಲಿಸಲು, ಅವರ ಅಧಿಕೃತ ‘ಎಕ್ಸ್‌’ ಖಾತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಆದರೆ, ಆರ್‌ಎಸ್‌ಎಸ್‌, ಐಫೋನ್‌ –17 ಕೇಸರಿ ಆವೃತ್ತಿಯ ಬಗ್ಗೆ  ಅವರು ಎಲ್ಲೂ ಪ್ರಸ್ತಾಪಿಸಿಲ್ಲ. ಆ್ಯಪಲ್‌ ಕಂಪನಿಯೂ ಅಂತಹ ಘೋಷಣೆ ಮಾಡಿಲ್ಲ. ವಿಡಂಬನೆಗಾಗಿ ಮಾಡಲಾದ ಪೋಸ್ಟ್‌ ಅನ್ನು ಹಲವರು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ ಎಂದು ನ್ಯೂಸ್‌ಚೆಕರ್‌.ಇನ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.