ADVERTISEMENT

ತೆಲಂಗಾಣದ ಬಿಜೆಪಿ ಐಟಿ ಸೆಲ್‌ನ ವಿವೇಕಾನಂದ ಅವರು ಹರಿಬಿಟ್ಟಿದ್ದ ವಿಡಿಯೊ ನಿಜಾನಾ?

​ಪ್ರಜಾವಾಣಿ ವಾರ್ತೆ
Published 25 ಮೇ 2020, 19:30 IST
Last Updated 25 ಮೇ 2020, 19:30 IST
ವಿಡಿಯೊ ದೃಶ್ಯಾವಳಿಗಳು
ವಿಡಿಯೊ ದೃಶ್ಯಾವಳಿಗಳು   

ಈದುಲ್‌ ಫಿತ್ರ್‌ ಹಬ್ಬದ ಮುನ್ನಾದಿನ ಹೈದರಾಬಾದ್‌ನ ಮದೀನಾ ಮಾರುಕಟ್ಟೆಯು ಜನರಿಂದ ಕಿಕ್ಕಿರಿದು ತುಂಬಿದೆ. ಮುಸ್ಲಿಮರು ಹಬ್ಬದ ಖರೀದಿಗೆ ದಾಂಗುಡಿಯಿಟ್ಟಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಐಟಿ ಸೆಲ್‌ನ ವಿವೇಕಾನಂದ ಅವರು ಹರಿಬಿಟ್ಟಿದ್ದ ವಿಡಿಯೊ ವೈರಲ್ ಆಗಿತ್ತು. ಇದನ್ನು ಹಲವರು ಷೇರ್ ಮಾಡಿದ್ದರು. ತೆಲಂಗಾಣ ಸರ್ಕಾರದ ನಡೆಯನ್ನೂ ಪ್ರಶ್ನಿಸಿದ್ದರು. ದೆಹಲಿಯಲ್ಲೂ ಇದೇ ರೀತಿಯ ಜನನಿಬಿಡ ಮಾರುಕಟ್ಟೆಯ ವಿಡಿಯೊವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದರು.

ಈ ಎರಡೂ ವಿಡಿಯೊಗಳು ಭಾರತಕ್ಕೆ ಸೇರಿದವುಗಳಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಇವುಗಳನ್ನು ಪಾಕಿಸ್ತಾನದ ಫೈಸಲಾಬಾದ್‌ನ ಅನಾರ್ಕಲಿ ಮಾರುಕಟ್ಟೆಯಲ್ಲಿ ಚಿತ್ರೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT