ADVERTISEMENT

ಅಮ್ಮನಿಗೆ ಮಗನ ಬಿಡುಗಡೆಯ ವಿಶ್ವಾಸ

ರಾಜೀವ್‌ ಹತ್ಯೆ ಪ್ರಕರಣದ ಆರೋಪಿಗಳ ಗಲ್ಲು ಶಿಕ್ಷೆ ಜೀವಾವಧಿಗೆ ಬದಲು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST
ರಾಜೀವ್‌ ಹತ್ಯೆ ಪ್ರಕರಣದ ಅಪರಾಧಿ ಪೇರ್ಅರಿವಲನ್‌ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಜೀವಾವಧಿಗೆ ಇಳಿಸಿ ಸೋಮವಾರ ತೀರ್ಪು ನೀಡಿದ ಸುದ್ದಿ ತಿಳಿದು ಅವರ ತಾಯಿ ಅರ್ಪುತಮ್‌ ಅಮ್ಮಾಳ್‌ ಅವರು ಚೆನ್ನೈನಲ್ಲಿ ಸಂಭ್ರಮಿಸಿದರು 	–ಪಿಟಿಐ ಚಿತ್ರ
ರಾಜೀವ್‌ ಹತ್ಯೆ ಪ್ರಕರಣದ ಅಪರಾಧಿ ಪೇರ್ಅರಿವಲನ್‌ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್‌ ಜೀವಾವಧಿಗೆ ಇಳಿಸಿ ಸೋಮವಾರ ತೀರ್ಪು ನೀಡಿದ ಸುದ್ದಿ ತಿಳಿದು ಅವರ ತಾಯಿ ಅರ್ಪುತಮ್‌ ಅಮ್ಮಾಳ್‌ ಅವರು ಚೆನ್ನೈನಲ್ಲಿ ಸಂಭ್ರಮಿಸಿದರು –ಪಿಟಿಐ ಚಿತ್ರ   

ಚೆನ್ನೈ(ಪಿಟಿಐ): ರಾಜೀವ್‌ ಹತ್ಯೆ ಪ್ರಕರಣದ ಆರೋಪಿಗಳ ಗಲ್ಲುಶಿಕ್ಷೆಯನ್ನು  ಜೀವಾ ವಧಿಗೆ ಪರಿವರ್ತಿಸಿ ಸುಪ್ರೀಂಕೋರ್ಟ್‌ ತೀರ್ಪುಗೆ ಪ್ರತಿಕ್ರಿಯಿಸಿವ ಆರೋಪಿ ಎ.ಜಿ.ಪೇರ್ಅರಿವಲನ್‌ ತಾಯಿ  ಪುತ್ರನ ಬಿಡುಗಡೆಯಾಗಲಿದ್ದಾನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಪೇರ್ಅರಿವಲನ್‌ ತಾಯಿ ಅರ್ಪುತಮ್‌ ಅಮ್ಮಾಳ್‌, ಇಂತಹ ತೀರ್ಪು ನೀಡಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ತೀರ್ಪಿಗಾಗಿ ನಾನು ಕಳೆದ 23 ವರ್ಷಗಳಿಂದ ಕಾಯುತ್ತಿದ್ದೆ. ಇದೇ  ಆಶಾವಾದದಿಂದ ನಾನು ಬದುಕುತ್ತಿದ್ದೇನೆ. ಈಗ ನನ್ನ ಮನಸ್ಸಿಗೆ ಶಾಂತಿ ದೊರೆತಿದೆ’ ಎಂದು ಹೇಳಿದ್ದಾರೆ.

‘ನನ್ನ ಮಗ ಏನು ತಪ್ಪು ಮಾಡ ದಿದ್ದರೂ ಕಳೆದ 23 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆತ ಮಾಡದ ತಪ್ಪಿಗಾಗಿ ಶಿಕ್ಷೆ ಅನು­ಭವಿಸುತ್ತಿದ್ದಾನೆ. ಆತನನ್ನು ಬಿಡುಗಡೆ ಮಾಡ­ಬೇಕು. ಜೈಲಿನಿಂದ ಬಿಡುಗಡೆ­ಯಾಗುವ ವಿಶ್ವಾಸದಲ್ಲಿದ್ದೇನೆ’ ಎಂದರು. ಇದೇ ಸಂದರ್ಭದಲ್ಲಿ ರಾಜೀವ್‌ ಗಾಂಧಿ ಹಂತಕರ ಮರಣದಂಡನೆ ಶಿಕ್ಷೆ­ಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿ­ಸ­ಬೇಕೆಂದು  ಒತ್ತಾಯಿಸಿ  ಹೋರಾಟ ನಡೆ ಸಿದ­ವರಿಗೆ ಧನ್ಯವಾದ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.