ನವದೆಹಲಿ ( ಐ.ಎಎನ್ಎಸ್): ಭಯೋತ್ಪಾದನೆ ವಿರೋಧಿ ಜಾಗೃತಾ ಜಾಲ (ಎನ್ ಸಿ ಟಿ ಸಿ)ಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಮಂಡಿಸಿದ ತಿದ್ದುಪಡಿ ನಿರ್ಣಯಗಳು ರಾಜ್ಯಸಭೆಯಲ್ಲೂ ಸೋಲು ಕಂಡಿದ್ದರಿಂದ ಯುಪಿಎ ಸರ್ಕಾರ ಮತ್ತೊಮ್ಮೆ ಮುಜುಗರದಿಂದ ಪಾರಾಗಿದೆ.
ಭಯೋತ್ಪಾದನಾ ನಿಗ್ರಹ ಕೇಂದ್ರವನ್ನು ವಿರೋಧಿಸಿ 82 ಸದಸ್ಯರು ಮತ ಚಲಾಯಿಸಿದರೆ, ಪರವಾಗಿ 105 ಸಂಸದರು ಮತ ಚಲಾಯಿಸಿದರು ಎಂದು ರಾಜ್ಯಸಭಾ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಅವರು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.