ADVERTISEMENT

ಗುಜರಾತ್‌: ಮೀಸಲಾತಿ ಪ್ರತಿಭಟನೆ, ಹಿಂಸಾಚಾರ, ಲಾಠಿಚಾರ್ಜ್‌

ಪಟೇಲ್‌ ಸಮುದಾಯದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2016, 11:31 IST
Last Updated 17 ಏಪ್ರಿಲ್ 2016, 11:31 IST
ಗುಜರಾತ್‌: ಮೀಸಲಾತಿ ಪ್ರತಿಭಟನೆ, ಹಿಂಸಾಚಾರ, ಲಾಠಿಚಾರ್ಜ್‌
ಗುಜರಾತ್‌: ಮೀಸಲಾತಿ ಪ್ರತಿಭಟನೆ, ಹಿಂಸಾಚಾರ, ಲಾಠಿಚಾರ್ಜ್‌   

ಮೆಹಸಾನ (ಪಿಟಿಐ): ಇತರೆ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಭಾನುವಾರ ಗುಜರಾತ್‌ನ ಮೆಹಸಾನ ಪಟ್ಟಣದಲ್ಲಿ ಪಟೇಲ್‌ ಸಮುದಾಯ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

ಜೈಲಿನಲ್ಲಿರುವ ತಮ್ಮ ಸಮುದಾಯದ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಮೊಧೆರಾ ಚೌಕದಲ್ಲಿ ಸೇರಿ ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು. ಅಶ್ರುವಾಯು ಸೆಲ್‌ ಸಿಡಿಸಿ ಗುಂಪನ್ನು ಚದುರಿಸಿದರು. ಲಾಠಿಪ್ರಹಾರದಲ್ಲಿ ಸರ್ದಾರ್ ಪಟೇಲ್‌  ಗ್ರೂಪ್‌ನ (ಎಸ್‌ಪಿಜಿ) ಲಾಲ್‌ಜಿ ಪಟೇಲ್‌ ಅವರ ತಲೆಗೆ ಗಂಭೀರ ಗಾಯವಾಗಿದೆ.

‘ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಪೊಲೀಸರು ಇದ್ದಕ್ಕಿದ್ದಂತೆ ಲಾಠಿ ಪ್ರಹಾರ ಆರಂಭಿಸಿದರು’ ಎಂದು ಲಾಲ್‌ಜಿ ಪಟೇಲ್‌ ಹೇಳಿದ್ದಾರೆ.

‘ಪ್ರತಿಭಟನಾ ನಿರತ ಗುಂಪೊಂದು ಕಲ್ಲು ತೂರಾಟ ನಡೆಸುವ ಮೂಲಕ ಹಿಂಸಾಚಾರಕ್ಕೆ ಇಳಿಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು’ ಎಂದು ಗುಜರಾತ್‌ನ ಪ್ರಭಾರ ಡಿಜಿಪಿ ಪಿಪಿ ಪಾಂಡೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT