ADVERTISEMENT

ಜೈಲಿಗೆ ಬಿಗಿ ಭದ್ರತೆ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ನವದೆಹಲಿ: ‘ನಕ್ಸಲೀಯರು ಇರುವ ಕಾರಾಗೃಹಗಳಿಗೆ ಬಿಗಿ ಭದ್ರತೆ ಒದಗಿಸಬೇಕು’ ಎಂದು ನಕ್ಸಲ್‌ಪೀಡಿತ 9 ರಾಜ್ಯಗಳಿಗೆ ಕೇಂದ್ರವು ಎಚ್ಚರಿಕೆ ನೀಡಿದೆ.
ಛತ್ತೀಸಗಡ, ಜಾರ್ಖಂಡ್‌್, ಬಿಹಾರ, ಒಡಿಶಾ, ಪಶ್ಚಿಮ­ಬಂಗಾಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ­ಪ್ರದೇಶ ಹಾಗೂ ಮಧ್ಯ­ಪ್ರದೇಶ ರಾಜ್ಯಗಳಿಗೆ ಈ ಸಂಬಂಧ ಗೃಹ ಕಾರ್ಯದರ್ಶಿ ಪತ್ರಗಳನ್ನು ಬರೆದಿದ್ದಾರೆ.

ಜೈಲಿನಲ್ಲಿರುವ ತಮ್ಮ ಸದಸ್ಯರನ್ನು ಬಿಡಿಸಿ­ಕೊಳ್ಳಲು ನಕ್ಸಲ್‌ ಮುಖಂಡರು ಹೊಂಚು ಹಾಕು­ತ್ತಿದ್ದಾರೆ ಎಂಬ ಮಾಹಿತಿ ಬಂದಿರು­ವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಕ್ಸಲ್‌ ಮುಖಂಡರು ಇರುವ ಜೈಲಿನ ಒಳಗೆ ಹಾಗೂ ಹೊರಗೆ ಬಿಗಿ ಭದ್ರತೆ ಒದಗಿಸಿ.

ಕಾರಾಗೃಹಗಳ ಮೇಲೆ ನಡೆಯಬಹುದಾದ ನಕ್ಸಲ್ ದಾಳಿ ಪ್ರಯತ್ನವನ್ನು ವಿಫಲಗೊಳಿಸಲು ಬೇಹುಗಾರಿಕೆ ಜಾಲವನ್ನು ಬಲಪಡಿಸುವ ಅಗತ್ಯವಿದೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.