ADVERTISEMENT

ದಕ್ಷಿಣ ಕೇರಳ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ತಿರುವನಂತಪುರ (ಪಿಟಿಐ): ಕೇರಳದಲ್ಲಿ ಈ ಬಾರಿ ನೈರುತ್ಯ ಮಾರುತಗಳು ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿಸಿವೆ.

ಈ ಋತುವಿನಲ್ಲಿ ವಾಡಿಕೆಯಂತೆ ಜೂನ್ 1ರಂದೇ ಮುಂಗಾರು ಕೇರಳಕ್ಕೆ ಕಾಲಿಟ್ಟಿದೆ. ಅಲ್ಲದೇ ಸಾಮಾನ್ಯಕ್ಕಿಂತ ಶೇ 41ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಆರಂಭವಾದ ಮೊದಲ ಐದು ದಿನಗಳಲ್ಲಿ 149.33 ಮಿ.ಮೀ. ದಾಖಲೆ ಮಳೆಯಾಗಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ 77.93 ಮಿ.ಮೀ. ಮಳೆಯಾಗುತ್ತದೆ.

ದಕ್ಷಿಣ ಕೇರಳದ ಇಡುಕ್ಕಿ ಮತ್ತು ಪಥನಾಮಥಿಟ್ಟಾ ಜಿಲ್ಲೆಗಳಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿರುವುದರಿಂದ ಈ ಭಾಗದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಆದರೆ, ಕಾವೇರಿ ಕೊಳ್ಳದ ಕಬಿನಿ ಜಲಾಶಯಕ್ಕೆ ನೀರು ತರುವ ಉತ್ತರ ಕೇರಳದ ವೈನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಮಳೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.