
ಪ್ರಜಾವಾಣಿ ವಾರ್ತೆಚೆನ್ನೈ (ಪಿಟಿಐ): `ಕೂಡುಂಕುಳಂ ಅಣು ವಿದ್ಯುತ್ ಯೋಜನೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಕೆಲವು ಸಂಘಟನೆಗಳು ವಿದೇಶಿ ಮೂಲದಿಂದ ಸುಮಾರು 55 ಕೋಟಿ ರೂಪಾಯಿ ಪಡೆದಿರುವ ಬಗ್ಗೆ ಗೃಹ ಸಚಿವಾಲಯದ ವಿಶೇಷ ತಂಡಕ್ಕೆ ಮಾಹಿತಿ ದೊರೆತಿದೆ~ ಎಂದು ಕೇಂದ್ರ ಸಚಿವ ವಿ.ನಾರಾಯಣಸ್ವಾಮಿ ಹೇಳಿದ್ದಾರೆ.
`ಸಚಿವಾಲಯದ ವಿಶೇಷ ತಂಡ ಸಂಘಟನೆಗಳ ಆಯವ್ಯಯ ಪಟ್ಟಿಯನ್ನು ತಪಾಸಣೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ~ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.