ADVERTISEMENT

ನಿತ್ಯ 6000 ಮಂದಿ ಭೇಟಿ...ಗಿಜಿಗುಡುವ ಜಾಗ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ನವದೆಹಲಿ (ಐಎಎನ್‌ಎಸ್): ಬುಧವಾರ ಬಾಂಬ್ ಸ್ಫೋಟಕ್ಕೆ ಗುರಿಯಾದ ಇಲ್ಲಿನ ಹೈಕೋರ್ಟ್ 4.57 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಪ್ರತಿನಿತ್ಯ ಕನಿಷ್ಠ 6000 ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಪ್ರತಿ ಬುಧವಾರದಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕೂಡ ನಡೆಯುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ.

7000 ವಕೀಲರ ಕೊಠಡಿಗಳು ಈ ಸಮುಚ್ಚಯದಲ್ಲಿದ್ದು, ನಿತ್ಯ ಕನಿಷ್ಠ 3500 ವಕೀಲರು ಭೇಟಿ ನೀಡುತ್ತಾರೆ. ಇಲ್ಲಿರುವ ಒಟ್ಟು ನ್ಯಾಯಾಲಯಗಳ ಸಂಖ್ಯೆ 40ಕ್ಕೂ ಹೆಚ್ಚು. ಜತೆಗೆ, 10 ರಾಜಿ ಸಂಧಾನ ಕೊಠಡಿಗಳೂ ಇವೆ. ಪ್ರತಿದಿನ ಇಲ್ಲಿಗೆ ಭೇಟಿ ನೀಡುವ ಕಕ್ಷಿದಾರರ ಸಂಖ್ಯೆ 2000ಕ್ಕೂ ಹೆಚ್ಚಿದ್ದರೆ ನ್ಯಾಯಾಲಯದ ಗುಮಾಸ್ತರು ಹಾಗೂ ಅಧಿಕಾರಿಗಳ ಸಂಖ್ಯೆ 600ಕ್ಕೂ ಹೆಚ್ಚು.

ನ್ಯಾಯಾಲಯದ ಸುತ್ತ ಒಂಬತ್ತು ಗೇಟ್‌ಗಳಿವೆ. ಆದರೆ ಮೇ 25ರಂದು ಇಲ್ಲಿ ಸ್ಫೋಟ ಸಂಭವಿಸಿದ ನಂತರ 5 ಮತ್ತು 7ನೇ ಗೇಟ್‌ಗಳ ಮೂಲಕ ಮಾತ್ರ ಕಕ್ಷಿದಾರರನ್ನು ಒಳಗೆ ಬಿಡಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.