ADVERTISEMENT

ಬುಡಕಟ್ಟು ಮಹಿಳೆಯರ ನೃತ್ಯ: ಅನಾಮಿಕರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 8:35 IST
Last Updated 12 ಜನವರಿ 2012, 8:35 IST

ಪೋರ್ಟ್ ಬ್ಲೇರ್ (ಪಿಟಿಐ) : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಬಂದಿದ್ದ ಪ್ರವಾಸಿಗರ ಮುಂದೆ ಸ್ಥಳೀಯ ಜವಾರಾ ಬುಡಕಟ್ಟು  ಸಮುದಾಯಕ್ಕೆ ಸೇರಿದ್ದ ಮಹಿಳೆಯರು ಅರೆ ನಗ್ನರಾಗಿ ಕುಣಿಯುತ್ತಿರುವ ವಿಡಿಯೊ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿ, ಅದು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಪೊಲೀಸರು ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಭಾರತೀಯ ದಂಡ ಸಂಹಿತೆ, ಮಾಹಿತಿ ಮತ್ತು ತಂತ್ರಜ್ಞಾನ  ಜೊತೆಗೆ ಬುಡಕಟ್ಟು ಜಾತಿ ಮತ್ತು ಪಂಗಡ ಹಾಗೂ ಮೂಲನಿವಾಸಿಗಳ ಹಿತರಕ್ಷಣೆ ಕಾನೂನುಗಳ ಅಡಿ ಪೊಲೀಸರು ಪ್ರರಕಣ ದಾಖಲಿಸಿಕೊಂಡಿದ್ದಾರೆಂದು ಅಧಿಕೃತ ಮೂಲಗಳು ಗುರುವಾರ ಇಲ್ಲಿ ತಿಳಿಸಿವೆ.

ಡಿವೈಎಸ್ಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ಅಂಡಮಾನ್ ನಿಕೋಬಾರ್ ಪೊಲೀಸರು ಒಂದು ತನಿಖಾ ತಂಡವನ್ನು ರಚಿಸಿದ್ದು, ಈ ತಂಡ ಕೇಂದ್ರ ತನಿಖಾ ತಂಡದ ಸಹಕಾರದಲ್ಲಿ ವಿಡಿಯೊ ದೃಶ್ಯಗಳು ಯಾವ ಕಂಪೂಟರ್ ಮೋಲದಿಂದ ರವಾನೆಯಾದವು ಎಂಬುದನ್ನು ಪತ್ತೆ ಹಚ್ಚಲಿದೆ.

ADVERTISEMENT

ಪ್ರವಾಸಿಗರ ಮುಂದೆ ಜವಾರಾ ಬುಡಕಟ್ಟು ಮಹಿಳೆಯರು ಅರೆ ನಗ್ನರಾಗಿ ಕುಣಿಯುತ್ತಿರುವ ವಿಡಿಯೊ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ಆ ಸಂಗತಿ ವಿವಾದವನ್ನು ಹುಟ್ಟುಹಾಕಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.