ADVERTISEMENT

ಮೇವು ಹಗರಣ: ತೀರ್ಪಿಗೆ ತಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ನವದೆಹಲಿ (ಪಿಟಿಐ): ಜಾರ್ಖಂಡ್‌ನ ವಿಶೇಷ ಸಿಬಿಐ ಕೋರ್ಟ್ ಮೇವು ಹಗರಣದ ತೀರ್ಪನ್ನು ಈ ತಿಂಗಳ 15 ರಂದು ಪ್ರಕಟಿಸದಂತೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಪಿ. ಕೆ. ಸಿಂಗ್, ಬಿಹಾರ ಸಚಿವ ಪಿ. ಕೆ. ಶಾಹಿ ಸಂಬಂಧಿಯಾಗಿರುವುದರಿಂದ ತಮ್ಮ ಬಗ್ಗೆ ಪಕ್ಷಪಾತ ಭಾವನೆ ಹೊಂದಿದ್ದಾರೆ ಎಂಬ ಲಾಲು ಅವರ ಆರೋಪವು ಪರಿಶೀಲನೆಗೆ ಯೋಗ್ಯವಾಗಿದೆ ಎಂದು ನ್ಯಾಯಮೂರ್ತಿ ಪಿ. ಸದಾಶಿಂ ನೇತೃತ್ವದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.