ADVERTISEMENT

ಮೋದಿ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ: ಎಐಟಿಯುಸಿ

ಪಿಟಿಐ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ : ಕಾರ್ಮಿಕ ವಿರೋಧಿ ಧೋರಣೆ ತಳೆದಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 40 ದಿನ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವುದಾಗಿ ಪ್ರಮುಖ ಕಾರ್ಮಿಕ ಸಂಘಟನೆ ಎಐಟಿಯುಸಿ ಸೋಮವಾರ ಘೋಷಿಸಿದೆ.

ಮೋದಿ ಅವರು ದೇಶವನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ಆರೋಪಿಸಿರುವ ಸಂಘಟನೆ ಮುಖ್ಯಸ್ಥ ಅಮರ್‌ಜೀತ್ ಕೌರ್ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.

‘ಫೆಬ್ರುವರಿಯಲ್ಲಿ ನಡೆಯಬೇಕಿದ್ದ ವಾರ್ಷಿಕ ತ್ರಿಪಕ್ಷೀಯ ಸಮಾವೇಶದ ದಿನಾಂಕವನ್ನು ರದ್ದುಪಡಿಸಿದ್ದು ಅಚ್ಚರಿ ಉಂಟು ಮಾಡಿತು. ದಿನಾಂಕವನ್ನು ಒಪ್ಪಿಕೊಂಡಿದ್ದ ಪ್ರಧಾನಿ ಕಚೇರಿಯು ಬಳಿಕ ರದ್ದುಗೊಳಿಸಿತು’ ಎಂದಿದ್ದಾರೆ.

ADVERTISEMENT

ಈಗಿರುವ 44 ಕಾನೂನುಗಳ ಬದಲಾಗಿ ನಾಲ್ಕು ನಿಯಮಗಳನ್ನು ತರಲು ಸಿದ್ಧತೆ ನಡೆಸಿದೆ ಎಂದೂ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.